ಮಂಗಳೂರು: ಇಷ್ಟು ದಿನ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದ ಮಂಗಳೂರಿನ ಜನರು ಕೊನೆಗೂ ಎಚ್ಚೆತ್ತುಕೊಂಡಿದ್ದಾರೆ.
ಇಂದು ಬೆಳಗ್ಗೆ ಮಂಗಳೂರು ನಗರದ ಮಲ್ಲಿಕಟ್ಟೆ ಮಾರ್ಕೆಟ್ ನಲ್ಲಿ ಅಗತ್ಯ ಸಾಮಾಗ್ರಿಗಳನ್ನು ಕೊಳ್ಳಲು ಬಂದಿರುವ ಜನ ಸಾಮಾಜಿಕ ಅಂತರ ಕಾಯ್ದುಕೊಂಡು ಶಿಸ್ತು ಪಾಲನೆ ಮಾಡಿದ್ದರು. ಅಂಗಡಿ ಮುಂಬಾಗ ಯಾವುದೇ ಸೇಫ್ಟಿ ಲೈನ್ ಇಲ್ಲದಿದ್ದರೂ ಎರಡು ಫೀಟ್ ಅಂತರ ಕಾಯ್ದುಕೊಂಡರು. ಗ್ರಾಹಕರ ಖರೀದಿ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಂಗಡಿ ಮಾಲಕರಿಗೆ ಸೂಚಿಸಿದ್ದ ಪಾಲಿಕೆ ಎಚ್ಚರಿಕೆ ನೀಡಿತ್ತು.
ಸಾಮಾಜಿಕ ಅಂತರ ಕಾಯ್ದು ಕೊಳ್ಳದೇ ಇದ್ದಲ್ಲಿ ಮಾಲಕರ ವಿರುದ್ಧ ಕ್ರಮ ಕೈಗೊಳ್ಳುದ್ದಾಗಿ ಹೇಳಿತ್ತು ಹಾಗಾಗಿ ಅಂಗಡಿಗೆ ಬರುವ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ವರ್ತಕರು ಸೂಚನೆ ನೀಡಿದರು.
ಇನ್ನೂ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ಗೂ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಮಾಡಿ, ಚಿಲ್ಲರೆ ವ್ಯಾಪಾರಿಗಳಿಗೆ ಮಾತ್ರ ದಿನಸಿ, ಹಣ್ಣು ಮತ್ತು ತರಕಾರಿ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು.












