ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 3 ಲಕ್ಷ ರೂ. ನಗದು ಮತ್ತು 4 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆ.ಜಿ.ಹಳ್ಳಿ ನಗರ ಇದಾಯತ್ ನಗರ 6ನೇ ಕ್ರಾಸ್ ಇಮ್ರಾನ್ ಪಾಷ (25), ಜಾಲಿ ಮೋಲಾ ರಾಣಸಿಂಗ್ ಬಿಡಿಜಿ ಲೈನ್ ಮುಹಮ್ಮದ್ ಇರ್ಫಾನ್ (27), ನ್ಯೂ ಗುಡದಹಳ್ಳಿ ನೆಹರೂ ರಸ್ತೆ 4ನೇ ಕ್ರಾಸ್ ಮುಜಾಮಿಲ್ ಅಹ್ಮದ್ (21), ಸರ್ವಜ್ಞನಗರ ಹೆಣ್ಣೂರು ಕ್ರಾಸ್, ಶಾರದಾ ಶಾಲೆ ಹತ್ತಿರ ಚಿಕ್ಕಲೇಔಟ್ ರೋಮನ್ ವಿಮಲ್ ರಾಜ್ (29) ಬಂಧಿತ ಆರೋಪಿಗಳು.
ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಿಸಿದಂತೆ ಅ. 7ರಂದು ಕೊಲ್ಕತ್ತಾ ಮತ್ತು ಚೆನ್ನೈ ತಂಡಗಳ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಸಾರ್ವಜನಿಕರಿಂದ ಮೊಬೈಲ್ ಫೋನ್ ಮೂಲಕ ಬೆಟ್ಟಿಂಗ್ ಕಟ್ಟಿಸಿಕೊಂಡಿದ್ದರು.
ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡಿಸುತ್ತಿರುವ ಒಬ್ಬ ವ್ಯಕ್ತಿ ಅ.8ರಂದು ಗೆದ್ದವರಿಗೆ ಹಣ ಕೊಡಲು ಮತ್ತು ಸೋತವರಿಂದ ಹಣ ಪಡೆಯಲು ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ಆರ್ ಟಿಓ ಕಚೇರಿ ಬಳಿ ಬರುವ ವೇಳೆ ಸಿಸಿಬಿ ವಿಶೇಷ ವಿಚಾರಣಾ ದಳದ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.