ಶೀರೂರು ಪರ್ಯಾಯಕ್ಕೆ ಸಹಕರಿಸುವುದು ಎಲ್ಲರ‌ ಕರ್ತವ್ಯ: ಡಾ.ವೀರೇಂದ್ರ ಹೆಗ್ಗಡೆ

ಉಡುಪಿ: ಉಡುಪಿ ಪರ್ಯಾಯ ಅಂದರೆ ಮಠದ ಪರ್ಯಾಯ ಅಲ್ಲ, ಅದು ನಮ್ಮೆಲ್ಲರ ಪರ್ಯಾಯ. ಭಾವೀ ಶೀರೂರು ಪರ್ಯಾಯ ಮಠಾಧೀಶರು ಅತ್ಯಂತ ಕಿರಿಯರು ಆಗಿರುವುದರಿಂದ ಅವರಿಗೆ ಎಲ್ಲರೂ ಸಹಕಾರ ಕೊಡುವುದು ಕರ್ತವ್ಯ ಹಾಗೂ ಜವಾಬ್ದಾರಿ ಆಗಿದೆ. ಆದುದರಿಂದ ಎಲ್ಲರೂ ಸಹಕಾರ ನೀಡಬೇಕೆಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಶೀರೂರು ಮಠದ ಪರ್ಯಾಯ ಸ್ವಾಗತ ಸಮಿತಿಯ ವತಿಯಿಂದ ಉಡುಪಿ ವಿದ್ಯೋದಯ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ಶೀರೂರು ಪರ್ಯಾಯ 2026-2028 ಇದರ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮಠದ ದಿವಾನ ಡಾ.ಉದಯ ಕುಮಾರ್ ಸರಳತ್ತಾಯ, ಸ್ವಾಗತ ಸಮಿತಿಯ ಅಧ್ಯಕ್ಷ, ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಎಂ.ಬಿ.ಪುರಾಣಿಕ್, ಅರುಣ್ ಕುಮಾರ್ ಪುತ್ತಿಲ ಮಾತನಾಡಿದರು.

ಶಾಸಕರಾದ ಸುನೀಲ್ ಕುಮಾರ್, ಗುರುರಾಜ್ ಗಂಟಿಹೊಳೆ, ಕಿರಣ್ ಕೊಡ್ಗಿ, ಮಾಜಿ ಶಾಸಕ ರಘುಪತಿ ಭಟ್, ಕಟೀಲು ಕ್ಷೇತ್ರ ಮೊಕ್ತೇಸರ ಲಕ್ಷ್ಮೀನಾರಾಯಣ ಅಸ್ರಣ್ಣ, ಹರಿಕೃಷ್ಣ ಪುನರೂರು, ದಿನಕರ ಹೇರೂರು, ಪ್ರದೀಪ್ ಕುಮಾರ್ ಕಲ್ಕೂರ, ಆನಂದ ಸುವರ್ಣ, ಹರಿಯಪ್ಪ ಕೊಟ್ಯಾನ್, ಧನಂಜಯ ಶೆಟ್ಟಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ಗಣೇಶ್ ರಾವ್, ರಮೇಶ್ ವೈದ್ಯ, ಪುರುಷೋತ್ತಮ ಶೆಟ್ಟಿ, ನಾರಾಯಣ ಕರ್ಕೇರ, ಬಿ.ಎನ್.ಶಂಕರ ಪೂಜಾರಿ, ಮಹೇಶ್ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.

ಸಮಿತಿಯ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾರಕೂರು ದಾಮೋದರ್ ಶರ್ಮ ಕಾರ್ಯಕ್ರಮ ನಿರೂಪಿಸಿದರು.