ರಜನಿಕಾಂತ್ ನಟನೆಯ “ಕೂಲಿ” ಟ್ರೈಲರ್ ಎಲ್ಲೆಡೆ ಅಬ್ಬರಿಸುತ್ತಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ “ಕೂಲಿ”ಚಿತ್ರದ ಟ್ರೈಲರ್ ಗೆ ಎಲ್ಲಡೆ ಭಾರೀ ಸ್ಪಂದನೆ ವ್ಯಕ್ತವಾಗಿದೆ. “ಕೂಲಿ” ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರವಿದು. “ಕೂಲಿ” ನಾಯಕ ನಟನಾಗಿ ರಜನಿಕಾಂತ್ ಅವರ 171 ನೇ ಚಿತ್ರವಾಗಿದ್ದು ಈ ವರ್ಷದಲ್ಲಿ ದಾಖಲೆ ಬರೆಯುವ ಚಿತ್ರವೆಂದು ಹೇಳಲಾಗ್ತಿದೆ.
ಕನ್ನಡಕ್ಕೂ ಈ ಚಿತ್ರಕ್ಕೆ ಮಹತ್ವವಿದೆ ಯಾಕೆಂದರೆ ರಜನಿಕಾಂತ್ ಜೊತೆಗೆ, ಕೂಲಿ ಚಿತ್ರದಲ್ಲಿ ನಟ ಉಪೇಂದ್ರ ಕೂಡ ನಟಿಸಿದ್ದಾರೆ. ಅಲ್ಲದೇ ನಾಗಾರ್ಜುನ, ಸೌಬಿನ್ ಶಾಹಿರ್, ಸತ್ಯರಾಜ್ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ರೇಬಾ ಮೋನಿಕಾ ಜಾನ್, ಜೂನಿಯರ್ ಎಂಜಿಆರ್, ಕನ್ನಾ ರವಿ, ಮೋನಿಶಾ ಬ್ಲೆಸ್ಸಿ ಮತ್ತು ಕಾಳಿ ವೆಂಕಟ್ ಕೂಡ ನಟಿಸಿದ್ದಾರೆ.
ರಜನಿ ಅವರ ಎಂದಿನ ಸ್ಟೈಲಿಶ್ ಪಂಚ್ ಡೈಲಾಗ್ ಗಳು, ಆಕ್ಷನ್ ದೃಶ್ಯಗಳು ಮತ್ತು ಮಾಸ್ ಶೈಲಿಯ ದೃಶ್ಯಗಳು “ಕೂಲಿ”ಚಿತ್ರದಲ್ಲಿವೆ. ಹಾಗಾಗಿ ಇಡೀ ಭಾರತೀಯ ಚಿತ್ರರಂಗ ಈ ಚಿತ್ರಕ್ಕಾಗಿ ಎದುರು ನೋಡುತ್ತಿದೆ. ಅಭಿಮಾನಿಗಳಂತೂ ತುದಿಗಾಲಲ್ಲಿ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.ಕನ್ನಡದ ಉಪೇಂದ್ರ ಅಭಿಮಾನಿಗಳೂ ಕಾತರರಾಗಿದ್ದಾರೆ.
ಪ್ಯಾನ್-ಇಂಡಿಯನ್ ಚಿತ್ರ ಆಗಸ್ಟ್ 14 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಮತ್ತು ಚಿತ್ರವು ಎಲ್ಲಾ ಸ್ಥಳಗಳಲ್ಲಿ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುನಃ ಬರೆಯಲು ಸಜ್ಜಾಗಿದೆ.












