ಮಂಗಳೂರು: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಮಂಗಳೂರಿನಲ್ಲಿ ಜೂ. 13 ರಂದು ಬೆಳಗ್ಗೆ 10.30
ಗಂಟೆಗೆ ಮದ್ರಾಸ್ ರೆಜಿಮೆಂಟಿನ ತಂಡದವರು ಸದರಿ ರೆಜಿಮೆಂಟಿನ ಮಾಜಿ ಸೈನಿಕರು ಹಾಗೂ ವೀರ ನಾರಿಯರೊಂದಿಗೆ ಮೌಖಿಕ ಸಂವಾದವನ್ನು ನಡೆಸಲಿದ್ದು, ಮದ್ರಾಸ್ ರೆಜಿಮೆಂಟಿನ ಎಲ್ಲಾ ಮಾಜಿ ಸೈನಿಕರು ಹಾಗೂ ವೀರ ನಾರಿಯರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಜಂಟಿ ನಿರ್ದೇಶಕರ ಕಾರ್ಯಾಲಯ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.












