ಶಂಕರನಾರಾಯಣ:ವಿದ್ಯಾರ್ಥಿಗಳು ತಮ್ಮ ಕಾಲೇಜು ಶಿಕ್ಷಣದ ಅನಂತರವೂ ನಿರಂತರ ಅಧ್ಯಯನ ಶೀಲರಾಗ ಬೇಕು.ಯಾವುದೇ ಸ್ಪಧಾ೯ತ್ಮಕ ಪರೀಕ್ಷೆಯಲ್ಲಿ ಯಶಸ್ವಿಗಳಿಸ ಬೇಕಾದರೆ ಮನಸ್ಸಿನಲ್ಲಿ ಅವಿರತವಾದ ಛಲ..ಇದರೊಂದಿಗೆ ಸೇೂಲೆ ಗೆಲುವಿನ ಮೊದಲ ಹೆಜ್ಜೆ ಎಂದು ನಿರಂತರ ಪ್ರಯತ್ನ ಶೀಲರಾದಾಗ ಮುಂದಿನ ಯಶಸ್ವು ನಿಮ್ಮದಾಗುತ್ತದೆ.ಸಾಧನೆಗೆ ಯಾವುದೇ ಭಾಷೆ ತೊಡಕಲ್ಲ ಬದಲಾಗಿ ಭಾಷೆಯಲ್ಲಿ ಪ್ರಬುದ್ಧತೆ ಬೆಳೆಸಿಕೊಳ್ಳುವಂತೆ ಚಂಡೀಗಢ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಚ್.ರಾಜೇಶ್ ಪ್ರಸಾದ್ ಹಿರಿಯ ಐ ಎ ಎಸ್.ಅಧಿಕಾರಿ ಅಭಿಪ್ರಾಯಿಸಿದರು.
ಅವರು ಶಂಕರನಾರಾಯಣ ಪ್ರಥಮ ದಜೆ೯ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ವತಿಯಿಂದ ಹಮ್ಮಿಕೊಂಡ ಸ್ಪಧಾ೯ತ್ಮಕ ಪ್ರೇರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಶೇಷ ಉಪನ್ಯಾಸವಿತ್ತರು.
ಸಮಾರಂಭದ ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಗುರುರಾಜ್ ಗಂಟಿ ಹೊಳೆ ವಹಿಸಿದ್ದರು.ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ದಿಕ್ಸೂಚಿ ಉಪನ್ಯಾಸವಿತ್ತರು.ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟರಾಮ್ ಭಟ್ಟ ಸ್ವಾಗತಿಸಿ ಪ್ರಸ್ತಾವನೆಗೈದರು.ಇದೇ ಸಂದರ್ಭದಲ್ಲಿ ಕಾಲೇಜಿನ ವಾಷಿ ೯ಕ ವಿಶೇಷ ಸಂಚಿಕೆ ಯುವ ಮಾನಸ ಅನಾವರಣಗೊಳಿಸಲಾಯಿತು.
ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾನಾಧಿಕಾರಿ ಡಾ.ದಿವ್ಯಾ ; ಹಿರಿಯ ಉಪನ್ಯಾಸಕಿ ಡಾ.ನಳಿನಾ ಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.















