ಉಡುಪಿ: ಪುತ್ತಿಗೆ ಪರ್ಯಾಯ ಮಹೋತ್ಸವಕ್ಕೆ ಕನರ್ಪಾಡಿ ಜಯದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರಿಂದ ಹೊರೆಕಾಣಿಕೆ ಸಮರ್ಪಿಸುವ ಬಗ್ಗೆ ಸಮಾಲೋಚನಾ ಸಭೆಯನ್ನು ನಡೆಸಲಾಯಿತು.
ಪರ್ಯಾಯ ಹೊರೆಕಾಣಿಕೆಯ ಸಂಚಾಲಕ ಸುಪ್ರಸಾದ ಶೆಟ್ಟಿ ಮಾತನಾಡಿ, ಹೊರೆಕಾಣಿಕೆಯ ವಿವರಗಳನ್ನು ತಿಳಿಸಿ ಈ ಬಾರಿಯ ವಿಶ್ವ ಪರ್ಯಾಯಕ್ಕೆ ಲಕ್ಷಾಂತರ ಭಕ್ತರು ಉಡುಪಿಗೆ ಆಗಮಿಸಲಿದ್ದು, ಅನ್ನದಾನಕ್ಕಾಗಿ ಬೃಹತ್ ಹೊರೆಕಾಣಿಕೆ ವ್ಯವಸ್ಥೆ ಆಯೋಜಿಸಬೇಕೆಂದು ವಿನಂತಿಸಿದರು.
ಗಂಗಾಧರ್ ರಾವ್ ಮಾತನಾಡಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿ ಹೊರೆಕಾಣಿಕೆಯ ಮೆರವಣಿಗೆಯು ವ್ಯವಸ್ಥಿತವಾಗಿ ಸಾಗಬೇಕೆಂದರು.
ಜಯಪ್ರಕಾಶ ಕೆದ್ಲಾಯ ಊರ ಸುತ್ತಮುತ್ತಲಿನ ಜನರ ಸಹಕಾರ ಕೋರಿದರು.
ಸ್ವಾಗತ ಸಮಿತಿಯ ರವೀಂದ್ರ ಆಚಾರ್ಯ, ರಘುಪತಿ ರಾವ್ ಹಾಗೂ ಊರ ಮುಖ್ಯಸ್ಥರು ಹಾಜರಿದ್ದರು.
ದೇವಸ್ಥಾನದ ಮುಖ್ಯಸ್ಥ ರಾಘವೇಂದ್ರ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.