ಕಳತ್ತೂರು: ಕುತ್ಯಾರು ಗ್ರಾಮೀಣ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಕಳತ್ತೂರು 2ನೇ ವಾರ್ಡಿನ ಕಾರ್ಯಕರ್ತರ
ಸಭೆಯು ಚಂದ್ರನಗರ ಬಟರ್ ಫ್ಲೈ ಗೆಸ್ಟ್ ಹೌಸ್ ಪಾರ್ಟಿಹಾಲ್ ಸಭಾಂಗಣದಲ್ಲಿ ಕರ್ನಾಟಕ ಸರಕಾರದ ಮಾಜಿ
ಸಚಿವ ವಿನಯ್ ಕುಮಾರ್ ಸೊರಕೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರ ಹೆಸರನ್ನು ಮತ ಪಟ್ಟಿಯಿಂದ ತೆಗೆದು ಹಾಕುವ ಹುನ್ನಾರವಿದ್ದು ಕಾರ್ಯಕರ್ತರನ್ನು ತಮ್ಮ ಹಕ್ಕಿನಿಂದ ವಂಚಿಸಲು ನೋಡಲಾಗುತ್ತಿದೆ. ಇದಕ್ಕೆ ಬಿಜೆಪಿ ನಾಯಕರು ಕುಮ್ಮಕ್ಕು ನೀಡುತ್ತಿದ್ದಾರೆ. ಪಟ್ಟಿಯಲ್ಲಿ ಹಲವರ ಹೆಸರುಗಳು ನಾಪತ್ತೆಯಾಗಿವೆ. ಕಾಂಗ್ರೆಸ್ ಮತದಾರರು ಇದರ ಬಗ್ಗೆ ಜಾಗ್ರತೆವಹಿಸಿ ತಮ್ಮ ಹೆಸರು ಮತ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.
ಬಳಿಕ ಸಂದರ್ಭ ಅವರಿಗೆ ಊರಿನ ಪರವಾಗಿ ವಿನಯ್ ಕುಮಾರ್ ಸೊರಕೆ ಅವರನ್ನು ಸನ್ಮಾನಿಸಲಾಯಿತು.
ಕುತ್ಯಾರು ಗ್ರಾಮೀಣ ಸಮಿತಿಯ ಅಧ್ಯಕ್ಷ ದಿವಾಕರ.ಡಿ.ಶೆಟ್ಟಿ , ಮೊಹಮ್ಮದ್ ಫಾರೂಕ್ ಚಂದ್ರನಗರ, ಉಮರಬ್ಬ ಚಂದ್ರನಗರ, ವಿಲ್ಸನ್ ಕುಂದರ್, ಕಾಪು ಬ್ಲಾಕ್ ಅಲ್ಪ ಸಂಖ್ಯಾತ ಘಟಕ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಬ್ಲಾಕ್ ಕಾರ್ಯದರ್ಶಿ ಅಮೀರ್ ಕಾಪು ಗ್ರಾಮದ ಹಿರಿಯರಾದ ವಿಲ್ಸನ್ ಕುಂದರ್, ಶಂಶುದ್ದೀನ್ ಯುಸುಫ್, ಭಾರತಿ ಶೆಟ್ಟಿಗಾರ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೆನ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.