ಪದವಿ ಮತ್ತು ಕೌಶಲ್ಯಾಧಾರಿತ ಶಿಕ್ಷಣದ ಸಂಗಮ: ಉಡುಪಿ ಉಪೇಂದ್ರ ಪೈ ಕಾಲೇಜು-MSDC ಸಹಯೋಗದಲ್ಲಿ ಪಡೆಯಿರಿ ಉದ್ಯೋಗಾಧಾರಿತ ಶಿಕ್ಷಣ; ದಾಖಲಾತಿ ಆರಂಭ

ಉಡುಪಿ: ಉಪೇಂದ್ರ ಪೈ ಮೆಮೊರಿಯಲ್ ಕಾಲೇಜು -Upendra Pai Memorial College (UPMC) ಸಂಸ್ಥೆ, Manipal Skill Development Centre (MSDC) ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಉದ್ಯೋಗಮುಖಿ ಶಿಕ್ಷಣ ಒದಗಿಸುವ ನೂತನ ಕಾರ್ಯಕ್ರಮಗಳನ್ನು ಘೋಷಿಸಿದೆ.

ಈ ಯೋಜನೆಯಡಿ ವಿದ್ಯಾರ್ಥಿಗಳು ಡಿಗ್ರಿಯೊಂದಿಗೆ ಪ್ರೊಫೆಷನಲ್ ಸ್ಕಿಲ್ ಡಿಪ್ಲೋಮಾವನ್ನು ಒಂದೇ ಸಮಯದಲ್ಲಿ ಪಡೆಯುವ ಅವಕಾಶ ಪಡೆಯಲಿದ್ದಾರೆ. ಸಾಮಾನ್ಯವಾಗಿ ಡಿಗ್ರಿ ಮತ್ತು ಡಿಪ್ಲೋಮಾ ಪಡೆಯಲು ನಾಲ್ಕು ವರ್ಷ ಬೇಕಾಗುತ್ತದೆ. ಆದರೆ ಈ ಸಂಯೋಜಿತ ಕಾರ್ಯಕ್ರಮದ ಮೂಲಕ ಕೇವಲ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಬಹುದಾಗಿದೆ ಎನ್ನುವುದು ವಿಶೇಷ.

ಯಾವೆಲ್ಲಾ ಕೋರ್ಸ್ ಗಳು?

ಕಾಮರ್ಸ್, ಮ್ಯಾನೇಜ್ಮೆಂಟ್ ಹಾಗೂ ಕಂಪ್ಯೂಟರ್ ಅಪ್ಲಿಕೇಶನ್ ಕ್ಷೇತ್ರಗಳಲ್ಲಿ B.Com, BBA ಮತ್ತು BCA ಪದವಿ ಕೋರ್ಸ್‌ಗಳನ್ನು ಈ ಯೋಜನೆಯಡಿ ನೀಡಲಾಗುತ್ತಿದೆ. ಇದಕ್ಕೆ ಜೊತೆಯಾಗಿ ಫಿನ್‌ಟೆಕ್, ಲಾಜಿಸ್ಟಿಕ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಡೇಟಾ ಅನಾಲಿಟಿಕ್ಸ್, ಟ್ಯಾಲಿ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಸೇರಿದಂತೆ ವಿವಿಧ ಹೈ-ಡಿಮ್ಯಾಂಡ್ ಕ್ಷೇತ್ರಗಳಲ್ಲಿ ಸ್ಕಿಲ್ ಡಿಪ್ಲೋಮಾಗಳನ್ನು MSDC ಮೂಲಕ ಕಲಿಯಲು ಅವಕಾಶವಿದೆ. 2026 ರ ವರ್ಷದ ಪ್ರವೇಶಾತಿ ಆರಂಭಗೊಂಡಿದೆ.

ಕಡಿಮೆ ಸಮಯದಲ್ಲಿ ಕೌಶಲ ಪಡೀರಿ: ಈ ಸಂಯೋಜಿತ ಕೋರ್ಸ್‌ಗಳು ಉದ್ಯಮದ ಅವಶ್ಯಕತೆಗಳಿಗೆ ತಕ್ಕಂತೆ ರೂಪುಗೊಂಡಿದ್ದು, ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸುವ ಹೊತ್ತಿಗೆ ಉದ್ಯೋಗಕ್ಕೆ ಸಿದ್ಧರಾಗುವಂತೆ ತರಬೇತಿ ನೀಡಲಾಗುತ್ತದೆ. ಅಲ್ಲದೆ, ಪ್ರತ್ಯೇಕವಾಗಿ ಕೋರ್ಸ್‌ಗಳನ್ನು ಮಾಡುವುದಕ್ಕಿಂತ ಈ ಯೋಜನೆ ಕಡಿಮೆ ವೆಚ್ಚದಲ್ಲಿ ಮಾಡಬಹುದಾಗಿದೆ.

ಈ ಹೊಸ ಯೋಜನೆ ವಿದ್ಯಾರ್ಥಿಗಳಿಗೆ ಕಡಿಮೆ ಸಮಯದಲ್ಲಿ ಉತ್ತಮ ಕೌಶಲ್ಯಗಳನ್ನು ಪಡೆದು ಉದ್ಯೋಗ ಕ್ಷೇತ್ರದಲ್ಲಿ ಸ್ಪರ್ಧಾತ್ಮಕವಾಗಿ ಮುನ್ನಡೆಯಲು ಸಹಾಯಕವಾಗಲಿದೆ ಎನ್ನುವುದು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್,

2026-2027 ಪ್ರವೇಶ ಆರಂಭ:

ಉಪೇಂದ್ರ ಪೈ ಮೆಮೊರಿಯಲ್ ಕಾಲೇಜಿನಲ್ಲಿ BCom, BBA, BCA ಪದವಿ ಜೊತೆಗೆ ಉತ್ತಮ ಶಿಕ್ಷಣದೊಂದಿಗೆ ಪ್ರಾಯೋಗಿಕ ಕೌಶಲಗಳನ್ನು ಪಡೆದು ನಿಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬಹುದು.

ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ: ವಿದ್ಯಾರ್ಥಿಗಳ II PUC ಅಂಕಗಳ ಆಧಾರದ ಮೇಲೆ ಶುಲ್ಕ ರಿಯಾಯಿತಿ ಕೂಡ ಲಭ್ಯವಿದೆ.

95% ಮೇಲ್ಪಟ್ಟು – ರೂ.10,000 ರಿಯಾಯಿತಿ

90% – 94% – ರೂ.7,500 ರಿಯಾಯಿತಿ

85% – 89% – ರೂ.5,000 ರಿಯಾಯಿತಿ,

75% – 84% → ರೂ.3,000 ರಿಯಾಯಿತಿ

ಆಸಕ್ತರು ಮಿಸ್ ಮಾಡದೇ ಸಂಪರ್ಕಿಸಿ.ಮೊ:7204824879