ದಿಗ್ವಿಜಯ ಭಾರಿಸಿದ ಕಾಂಡೋಮ್ : 2024 ಆನ್ ಲೈನ್ ಶಾಪಿಂಗ್ ನಲ್ಲಿ ಕಾಂಡೋಮ್ ಭರ್ಜರಿ ಸೇಲ್!

ಆನ್ಲೈನ್ ಶಾಪಿಂಗ್ ನಲ್ಲಿ ಪ್ರತೀವರ್ಷವೂ ಒಂದೊಂದು ಉತ್ಪನ್ನಗಳು ಸದ್ದು ಮಾಡುತ್ತಿರುತ್ತದೆ. ಆನ್ ಲೈನ್ ಮಾರುಕಟ್ಟೆಗಳಿಗೆ ವೇದಿಕೆ ಕಲ್ಪಿಸುವ ಕಂಪೆನಿಗಳು ವರ್ಷಾಂತ್ಯದ ಕೊನೆಗೆ ತಮ್ಮಲ್ಲಿ ಈ ವರ್ಷ ಜಾಸ್ತಿಯಾಗಿ ಮಾರಾಟವಾದ ವಸ್ತು ಯಾವುದು ಎನ್ನುವುದನ್ನು ಬಹಿರಂಗಪಡಿಸುತ್ತದೆ. ಇ-ಕಾಮರ್ಸ್ ದೈತ್ಯ ಸ್ವಿಗ್ಗಿ ತನ್ನ ಆನ್‌ಲೈನ್ ಶಾಪಿಂಗ್ ವಿವರಗಳನ್ನು ಬಹಿರಂಗಪಡಿಸಿದೆ. ಈ ವರ್ಷ ಭರ್ಜರಿಯಾಗಿ ಸೇಲ್ ಆದ ಉತ್ಪನ್ನಗಳಲ್ಲಿ ಮೊದಲೇ ಸ್ಥಾನವನ್ನು ಕಾಂಡೋಮ್ ಬಾಚಿಕೊಂಡಿದೆ ಎನ್ನುವುದು ಇಂಟರೆಸ್ಟಿಂಗ್ ಸಂಗತಿ.

ಹೌದು. ಸ್ವಿಗ್ಗಿ ಇನ್‌ಸ್ಟಾಮಾರ್ಟ್ – 2024 ಎಂಬ ಶೀರ್ಷಿಕೆಯ ವರದಿಯನ್ನು ಬಿಡುಗಡೆ ಮಾಡಿದೆ. ಹೈದರಾಬಾದ್ ನಿವಾಸಿಗಳು ಕಳೆದ ವರ್ಷದಲ್ಲಿ (2024) 2 ಲಕ್ಷ ಕಾಂಡೋಮ್ ಪ್ಯಾಕೆಟ್‌ಗಳನ್ನು ಆರ್ಡರ್ ಮಾಡಿದ್ದಾರೆ ಎಂದು ಈ ವರದಿ ಬಹಿರಂಗಪಡಿಸಿದೆ.

ಕಾಂಡೊಮ್ ಗಳಿಗೆ ಅತೀ ಹೆಚ್ಚಿನ ಆರ್ಡರ್ ನಮಗೆ ಸಿಕ್ಕಿದೆ. ಅದೂ ರಾತ್ರಿ 10 ರಿಂದ 11 ಗಂಟೆಯ ಒಳಗಡೆ ಅತೀಹೆಚ್ಚು ಕಾಂಡೋಮ್ ಸೇಲ್ ಆಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಆ ನಂತರದ ಸ್ಥಾನದಲ್ಲಿ, ಬಾಳೆಹಣ್ಣು, ಮಸಾಲಾ-ಫ್ಲೇವರ್‌ನ ಚಿಪ್ಸ್, ಕುರ್ಕುರೆ, ಈರುಳ್ಳಿ ಸೇರಿವೆ ಎಂದು ಸ್ವಿಗ್ಗಿ ಕಂಪನಿ ಹೇಳಿಕೊಂಡಿದೆ. ಕಳೆದ ವರ್ಷ ಬಿರಿಯಾನಿ ಅತೀ ಹೆಚ್ಚು ಆರ್ಡರ್ ಆದ ಉತ್ಪನ್ನಗಳ ಪೈಕಿ ಮೊದಲ ಸ್ಥಾನ ಗಿಟ್ಟಿಸಿತ್ತು. ಆದ್ರೆ ಈ ವರ್ಷ, ಕಾಂಡೋಮ್ ಗಳಿಸಿರುವುದು ವಿಶೇಷ.