ಉಡುಪಿ: ಇಲ್ಲಿನ 14 ವರ್ಷದ ಬಾಲಕಿಯೊಬ್ಬಳ ಪೋಷಕರು ತಮ್ಮ ಮಗಳ ಫೋಟೋವನ್ನು ಅಸಭ್ಯ ರೀತಿಯಲ್ಲಿ ರೂಪಾಂತರಿಸಿ(ಮಾರ್ಫ್) ಸ್ನ್ಯಾಪ್ಚಾಟ್ ವೀಡಿಯೋನಲ್ಲಿ ಪ್ರಸಾರ ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಬಾಲಕಿಯ ತಾಯಿ, ತನ್ನ ಮಗಳ ಫೋಟೋವನ್ನು ಅಸಭ್ಯ ವೀಡಿಯೊದಲ್ಲಿ ಬಳಸಿದ್ದಾರೆ ಮತ್ತು ಜುಲೈ 30 ರಂದು ಸ್ನ್ಯಾಪ್ಚಾಟ್ನಲ್ಲಿ ತನ್ನ ಸಂಪರ್ಕಗಳಿಗೆ ಪ್ರಸಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಕಲಿ ಸ್ನ್ಯಾಪ್ಚಾಟ್ ಖಾತೆಯನ್ನು ಬಳಸಿಕೊಂಡು ವೀಡಿಯೊವನ್ನು ಪ್ರಸಾರ ಮಾಡಲಾಗಿದೆ ಎಂದು ವರದಿ ಹೇಳಿದೆ.
ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 66 (ಸಿ) ಮತ್ತು 67 (ಬಿ) ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಸುಳಿವು ಸಿಕ್ಕಿದ್ದು, ಆರೋಪಿಗಳ ಪತ್ತೆಗೆ ಪ್ರಯತ್ನ ನಡೆದಿದೆ. ವಿಡಿಯೋವನ್ನು ತೆಗೆಯುವಂತೆ ಸ್ನ್ಯಾಪ್ಚಾಟ್ಗೆ ಪತ್ರ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ ಜಿಲ್ಲೆಯ ಕುಂದಾಪುರ ತಾಲೂಕಿನ 21 ವರ್ಷದ ವಿದ್ಯಾರ್ಥಿನಿಯೊಬ್ಬಳು ಕೂಡಾ ಇನ್ಸ್ಟ್ರಾಗ್ರಾಮ್ ಖಾತೆದಾರನೊಬ್ಬ ಅಸಭ್ಯ ಮತ್ತು ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸುವ ಮೂಲಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
ಜುಲೈ 29 ರಂದು ಉಡುಪಿ ಸೆನ್ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ, ವಿದ್ಯಾರ್ಥಿನಿಯು “ಜಿಗ್ರ್_ಕೋಬ್ರಾ” ಖಾತೆಯು ಆಕ್ಷೇಪಾರ್ಹ ಮತ್ತು ಅಸಭ್ಯ ಸಂದೇಶಗಳಿಂದ ತನಗೆ ಕಿರುಕುಳ ನೀಡುತ್ತಿದೆ ಎಂದು ಹೇಳಿದ್ದಾರೆ. ಆಕೆಯ ದೂರನ್ನು ಐಟಿ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಡಿ) ಅಡಿಯಲ್ಲಿ ದಾಖಲಿಸಲಾಗಿದೆ.