ಶ್ರೀಕೃಷ್ಣ ಜಯಂತಿಯ ಪ್ರಯುಕ್ತ ಹುಲಿವೇಷ ಮತ್ತು ಜಾನಪದ ತಂಡಗಳ ಸ್ಪರ್ಧೆ ಉದ್ಘಾಟನೆ

ಉಡುಪಿ: ಶ್ರೀಕೃಷ್ಣ ಜಯಂತಿಯ ಪ್ರಯುಕ್ತ ರಥಬೀದಿಯ ಉತ್ಸವ ಗುತ್ತಿನ ಶೀರೂರು ಮಠದ ವೇದಿಕೆಯಲ್ಲಿ ಹುಲಿವೇಷ ಮತ್ತು ಜಾನಪದ ತಂಡಗಳ ಸ್ಪರ್ಧೆಯನ್ನು ಪರ್ಯಾಯ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು,ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಹಾಗೂ ಶಿರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರು ಉದ್ಘಾಟಿಸಿದರು. ಶೀರೂರು ಮಠದ ದಿವಾನರಾದ ವಿದ್ವಾನ್ ಉದಯಕುಮಾರ ಸರಳತ್ತಾಯರು ಉಪಸ್ಥಿತರಿದ್ದರು.

ಕೃಷ್ಣ ಮಠದ ರಥಬೀದಿಯಲ್ಲಿ ವಿವಿಧ ವೇಷಗಳು ಜನರ ಮನರಂಜಿಸಿದ್ದು, ಇತ್ತೀಚೆಗೆ ಬಿಡುಗಡೆಯಾದ ಟೋಬಿ ಚಿತ್ರದ ವೇಷವು ಗಮನ ಸೆಳೆಯಿತು.