ಶಾಸಕರ ಆಪ್ತರ ಖಾತೆಗೆ ಕಮಿಷನ್- ಸುಳ್ಳು ಎಂದಾದರೆ ಪ್ರಮಾಣ ಮಾಡಲಿ: ಶುಭದರಾವ್ ಸವಾಲು..!!

ಕಾರ್ಕಳ: ಶಾಸಕ ಸುನೀಲ್ ಕುಮಾರ್ ಆಪ್ತರ ಖಾತೆಗೆ ಕಮಿಷನ್ ಸಂದಾಯವಾಗುತ್ತಿದೆ ಇದು ಸುಳ್ಳು ಎಂದು ಪ್ರಮಾಣ ಮಾಡುವ ದೈರ್ಯ ಶಾಸಕರಿಗೆ ಇದೆಯೇ ಎಂದು ಪ್ರಚಾರ ಸಮಿತಿಯ ಅದ್ಯಕ್ಷ ಶುಭದರಾವ್ ಸವಾಲು ಹಾಕಿದ್ದಾರೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ( ಕೆ.ಪಿ.ಟಿ.ಸಿ.ಎಲ್) ನಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ವಾಹನವನ್ನು ನಿಗಮದ ವತಿಯಿಂದ ನೀಡುತ್ತಿದ್ದು ಬಡ ವಾಹನದ ಮಾಲಕರು ಎಗ್ರಿಮೆಂಟ್ ಮೂಲಕ ಮಾಸಿಕ 32 ರಿಂದ ‌35 ಸಾವಿರ ರೂಪಾಯಿಗಳನ್ನು ಬಾಡಿಗೆ ರೂಪದಲ್ಲಿ ‌ಪಡೆಯುತ್ತಿದ್ದರು. ಸುನೀಲ್ ಕುಮಾರ್ ಇಂದನ ಸಚಿವರಾದ ತಕ್ಷಣ ತಾನು ನೇಮಕ ಮಾಡಿದ ನೂತನ ಎಂ. ಡಿ ಯ ಮೂಲಕ ಅವದಿಗೂ ಮುನ್ನ ಆ ಎಲ್ಲಾ ಅಗ್ರಿಮೆಂಟ್ ಗಳನ್ನು ರದ್ದು ಮಾಡಿಸಿ 603 ವಾಹನಗಳಿಗೆ ಏಕ ಟೆಂಡರ್ ಮಾಡುವುದರ ಮೂಲಕ ತನ್ನ ಆಪ್ತನ ಮಾಲಕತ್ವದ ಟ್ರಾವೆಲ್ ವಾಲ್ಡ್ ಸಂಸ್ಥೆಗೆ ಬಾಡಿಗೆಯನ್ನು ಹೆಚ್ಚಿಸಿ ಮಾಸಿಕ ರೂ 45‌ ಸಾವಿರ ಬಾಡಿಗೆಯನ್ನು ನಿಗದಿ ಮಾಡಿರುತ್ತಾರೆ. ಒಂದು ವಾಹನದ 13 ಸಾವಿರದಂತೆ 603 ವಾಹನದ ಸುಮಾರು‌ 80 ಲಕ್ಷ ರೂಪಾಯಿ ಹಣವು ಕಮಿಷನ್ ರೂಪದಲ್ಲಿ ಸಂದಾಯವಾಗುತ್ತಿದ್ದು ಇದರಲ್ಲಿ ಕಾರ್ಕಳದ 60 ಜನ ಆಪ್ತರ ಖಾತೆಗೆ ತಿಂಗಳಿಗೆ ರೂ 25‌ ಸಾವಿರದಂತೆ ಜಮೆಯಾಗುತ್ತಿದೆ.ಎಂದು ಆರೋಪಿಸಿದ್ದಾರೆ.

ಇದೇ ತರಹ ಹೆಸ್ಕಾ, ಚೆಸ್ಕಾಂ, ಜೆಸ್ಕಾಂ, ಬೆಸ್ಕಾಂ ಮತ್ತು ಮೆಸ್ಕಾಂ 1000ಕ್ಕೂ ಹೆಚ್ಚು ವಾಹನದ ಟೆಂಡರಿಗೆ ಮುಂದಾದಾಗ ಮೆಸ್ಕಾಂ ವಿಭಾಗದ 210 ವಾಹನ ಮಾಲಕರು ಕೋರ್ಟ್ ನಿಂದ ತಡೆ ತರುತ್ತಾರೆ. ಈಗ ಯಥಾ ಸ್ತಿತಿ ಮುಂದುವರಿಯುತ್ತಿದೆ.ಈಗ ಪ್ರಶ್ನೆ ಏನಂದರೆ 60 ಜನ ಶಾಸಕರ ಆಪ್ತರು ಪಡೆಯವ ಈ ಹಣ ಕಮಿಷನ್ ಹಣವಲ್ಲವೆ? ಶಾಸಕರಿಗಾಗಿ ದುಡಿದವರು 60 ಜನ ಮಾತ್ರವೇ? ಬೇರೆಯಾರು ಲೆಕ್ಕಕೇ ಇಲ್ಲವೇ?ಎಂದು ಪ್ರಶ್ನಿಸಿದ್ದಾರೆ

ಹಾಗಾಗಿ ಬಿಜೆಪಿ ಕಾರ್ಯಕರ್ತರಲ್ಲಿ ನನ್ನ ಮನವಿ, ನಿಮ್ಮ ಬದ್ಧತೆಯ ಬಗ್ಗೆ ನನಗೆ ಗೌರವವಿದೆ ಆದರೆ ಇನ್ನೂ ಸಮಯವಿದೆ ತಾವುಗಳು ಅತ್ಮವಿಮರ್ಶೆ ಮಾಡಿಕೊಳ್ಳಿ, ಶಾಸಕರ ಮೇಲೆ ಭೃಷ್ಟಾಚಾರದ ಇಷ್ಟು ದೊಡ್ಡ ಅರೋಪ ಬರಲು ಕಾರಣವೇನು? ನಿಮ್ಮ ಪಕ್ಷದ ಕೆಲವು ನಾಯಕರಿಗೆ ಅವರ ನಡೆಯ ಬಗ್ಗೆ ಬೇಸರವಿದೆಯಲ್ಲಾ ಯಾಕೆ? ಅವರ ಸ್ವಾರ್ಥಕ್ಕೆ ನಿಮ್ಮನ್ನು ಹೇಗೂ ಬಳಸಿಕೊಳ್ಳುತ್ತಾರೆ, ಅವರ ಲಾಭಕ್ಕೆ ನಡೆಯುವ ಕಾರ್ಯಕ್ರಮಗಳಲ್ಲಿ ತಾವುಗಳು ಕೇವಲ ಸ್ವಯಂ ಸೇವಕನಾಗಿ ದುಡಿಯಲು ಮಾತ್ರ ಸೀಮಿತವಾಗುತ್ತೀರಿ ಅಷ್ಟೇ.

ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ‌ಕಾರ್ಡಿನ ಫಲಾನುಭಾವಿಗಳು ತಾವೆಲ್ಲರೂ ಆಗುತ್ತೀರಿ ಎನ್ನುವುದು ನೆನಪಿರಲಿ. ಗೃಹಲಕ್ಷ್ಮಿ ಯೋಜನೆಯಲ್ಲಿ ನಿಮ್ಮ ತಾಯಿಯ ಅಥವಾ ಅಕ್ಕನ ಖಾತೆಗೆ ಪ್ರತೀ ತಿಂಗಳು 2000 ಹಣ ಸಂದಾಯವಾಗುತ್ತದೆ, ಉಚಿತ ವಿದ್ಯುತ್ ಮೂಲಕ ನಿಮ್ಮ ಮನೆಯ ಆರ್ಥಿಕ ಹೊರೆ ಕಡಿಮೆಯಾಗುತ್ತದೆ, ನಿಮ್ಮನೆಯಲ್ಲಿರುವ ವಿದ್ಯಾವಂತ ನಿರುದ್ಯೋಗಿಗೆ ಉದ್ಯೋಗ ಸಿಗುತ್ತದೆ ಹೀಗೆ ಅನೇಕ ಕಾಂಗ್ರೇಸ್ ಯೋಜನೆಗಳು ನಿಮ್ಮ ಮನೆ ತಲುಪಲಿದೆ ಹಾಗಾಗಿ ಕಾರ್ಕಳದಲ್ಲಿ ಭೃಷ್ಟಾಚಾರಕ್ಕೆ ಅವಕಾವೇ ಇಲ್ಲ ಎಂದು ಈ ಚುನಾವಣೆಯಲ್ಲಿ ತೋರಿಸಿ ಕೊಡೋಣ, ಇಲ್ಲವಾದರೆ ಭೃಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳೆದುಕೊಳ್ಳುತ್ತೇವೆ.ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸಿನ ಪ್ರಧಾನ ಕಾರ್ಯದರ್ಶಿಯಾದ ವಿವೇಕಾನಂದ ಶೆಣೈ ಹಾಗೂ ಜಿಲ್ಲಾ ಪ್ರಚಾರ ಸಮಿತಿಯ ಉಪಾಧ್ಯಕ್ಷರಾದ ನಿಟ್ಟೆ ದಿನಕರ ಶೆಟ್ಟಿ ಉಪಸ್ಥಿತರಿದ್ದರು