ಸೆಪ್ಟೆಂಬರ್‌ ಆರಂಭದಲ್ಲೇ ಏರಿತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರ ,ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಶಾಕ್

ನವದೆಹಲಿ: ಸೆಪ್ಟೆಂಬರ್‌ ಆರಂಭದಲ್ಲೇ ತೈಲ ಮಾರುಕಟ್ಟೆ ಕಂಪನಿಗಳು ಹೋಟೆಲ್‌ ಹಾಗೂ ರೆಸ್ಟೋರೆಂಟ್‌ ಮಾಲೀಕರಿಗೆ ದರ ಏರಿಕೆಯ ಶಾಕ್‌ ನೀಡಿವೆ. 19 ಕೆ.ಜಿ. ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರವನ್ನು ₹9.50ರವರೆಗೆ ಹೆಚ್ಚಿಸಲಾಗಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್‌ (IOCL) ಮಾಹಿತಿಯಂತೆ, ವಾಣಿಜ್ಯ ಸಿಲಿಂಡರ್‌ ದರ ಪರಿಷ್ಕರಣೆಯಾಗಿದ್ದರೂ ಗೃಹ ಬಳಕೆಯ 14 ಕೆ.ಜಿ. ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 5 ಕೆ.ಜಿ. ಹಾಗೂ 10 ಕೆ.ಜಿ. ಸಿಲಿಂಡರ್‌ಗಳ ದರದಲ್ಲೂ ಹೆಚ್ಚಿನ ಬದಲಾವಣೆ ಇಲ್ಲ.

ಸಿಲಿಂಡರ್‌ಗಳ ಪರಿಷ್ಕೃತ ದರ:

  • 5 ಕೆ.ಜಿ. ಸಾಮಾನ್ಯ ಎಲ್‌ಪಿಜಿ: ₹349.50
  • 5 ಕೆ.ಜಿ. XTRALITE: ₹339
  • 5 ಕೆ.ಜಿ. ನಾನ್‌-ಡೊಮೆಸ್ಟಿಕ್‌: ₹762ರಿಂದ ₹764ಕ್ಕೆ ಏರಿಕೆ