ಮಗದೊಮ್ಮೆ ಗೆಲುವಿನ ನಗೆ ಬೀರಿದ ಕರಾವಳಿಯ ಕುವರ: ರೂಪೇಶ್ ಶೆಟ್ಟಿಗೆ ಒಲಿದ ಬಿಗ್ ಬಾಸ್ ಟ್ರೋಫಿ

ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ಫಿನಾಲೆ ಫಲಿತಾಂಶ ಹೊರಬಿದ್ದಿದೆ. ಮಗದೊಮ್ಮೆ ಕರಾವಳಿಯ ಕುವರ ರೂಪೇಶ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದೀಪಿಕಾ ದಾಸ್, ರೂಪೇಶ್ ರಾಜಣ್ಣ ಮತ್ತು ದಿವ್ಯಾ ಉರುಡುಗ ಐದು ಫೈನಲಿಸ್ಟ್‌ಗಳಾಗಿದ್ದರು. ಎಲ್ಲರನ್ನೂ ಹಿಂದಿಕ್ಕಿ ರೂಪೇಶ್ ವಿಜೇತರಾಗಿ ಗೆಲುವಿನ ನಗೆ ಬೀರಿದ್ದಾರೆ. ಇವರಿಗೆ ಬಿಗ್ ಬಾಸ್ ಟ್ರೋಫಿ ಜೊತೆ 50 ಲಕ್ಷ ರೂ ಬಹುಮಾನವಾಗಿ ದೊರೆಯಲಿದೆ.

ರೂಪೇಶ್ ಶೆಟ್ಟಿ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್‌ 1 ಕಾರ್ಯಕ್ರಮದ ವಿನ್ನರ್‌ ಆಗಿದ್ದರು. ಅಲ್ಲಿಯೂ ವೀಕ್ಷಕರಿಂದ ಅತೀ ಹೆಚ್ಚು ಮತಗಳನ್ನು ಪಡೆದಿದ್ದರು. ಅತೀ ಹೆಚ್ಚು ವೋಟ್ ಪಡೆದ ರೂಪೇಶ್ ಶೆಟ್ಟಿ ಅವರಿಗೆ 5 ಲಕ್ಷ ರೂಪಾಯಿಯನ್ನು ಬಹುಮಾನವಾಗಿ ನೀಡಲಾಗಿತ್ತು.

ಬಿಗ್ ಬಾಸ್ ನಲ್ಲಿ ಸದಾ ನಗು ಮೊಗದಿಂದ ಇರುತ್ತಿದ್ದ ರೂಪೇಶ್‌ ಶೆಟ್ಟಿ ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕ್ಯಾಪ್ಟನ್ ಆಗಿ ಮೆಡೆಲ್ ಪಡೆದಿದ್ದಾರೆ. ಕಿಚ್ಚನಿಂದ ಮೆಚ್ಚುಗೆಯ ಚಪ್ಪಾಳೆಯನ್ನೂ ಗಿಟ್ಟಿಸಿಕೊಂಡಿದ್ದಾರೆ. ಎಲ್ಲ ವಿಷಯದಲ್ಲೂ ರೂಪೇಶ್ ಶೆಟ್ಟಿ ಎಲ್ಲರ ಮನ ಗೆದ್ದು ಇದೀಗ ಟ್ರೋಫಿ ಗೆದ್ದಿದ್ದಾರೆ.

ರಾಕೇಶ್ ಅಡಿಗ ಮೊದಲನೇ ರನ್ನರ್ ಅಪ್ ಮತ್ತು ದೀಪಿಕಾ ದಾಸ್ ಎರಡನೇ ರನ್ನರ್ ಅಪ್ ಸ್ಥಾನ ಗೆದ್ದಿದ್ದಾರೆ.