ಕುಂದಾಪುರ: ಪ್ರವಾಹಕ್ಕೆ ಸಿಲುಕಿದ ದೋಣಿಯಿಂದ ಎಂಟು ಮಂದಿಯನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್

ಕುಂದಾಪುರ: ಭಾರತೀಯ ಕೋಸ್ಟ್ ಗಾರ್ಡ್ (Indian Coast Guard) ಬುಧವಾರ ಕುಂದಾಪುರದ ಕರಾವಳಿಯಲ್ಲಿ ಪ್ರವಾಹಕ್ಕೆ ಸಿಲುಕಿದ ದೋಣಿಯಿಂದ ಎಂಟು ಸಿಬ್ಬಂದಿಗಳ ರಕ್ಷಣಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನೆರವೇರಿಸಿದೆ.

https://twitter.com/i/status/1770670174334570667

“ಕ್ಷಿಪ್ರ ಕಾರ್ಯಾಚರಣೆಯಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಶಿಪ್ ರಾಜ್‌ದೂತ್ ಮಾರ್ಚ್ 20 ರಂದು ಕುಂದಾಪುರದ ಪಶ್ಚಿಮಕ್ಕೆ 10 NM ದೂರದಲ್ಲಿ ಸಮುದ್ರದಲ್ಲಿ ಭಾರಿ ಪ್ರವಾಹಕ್ಕೆ ಸಿಲುಕಿದ IFB ಅಜ್ಮೀರ್-I (IND-KA-02-MM-4882) 08 ಸಿಬ್ಬಂದಿಯನ್ನು ರಕ್ಷಿಸಿದೆ. ಭಾರತೀಯ ಕೋಸ್ಟ್ ಗಾರ್ಡ್ ಶಿಪ್ ರಾಜ್‌ದೂತ್ ಬೋಟ್ ನಲ್ಲಿದ್ದ ಸಿಬ್ಬಂದಿಗೆ ಧೈರ್ಯ ತುಂಬಿದರು ಮತ್ತು ಪ್ರವಾಹದಿಂದ ರಕ್ಷಿಸುವ ಸಹಾಯವನ್ನು ಒದಗಿಸಿದ್ದಾರೆ” ಎಂದು ಭಾರತೀಯ ಕೋಸ್ಟ್ ಗಾರ್ಡ್ ತನ್ನ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದೆ.

ಸಿಬ್ಬಂದಿಗಳನ್ನು ರಕ್ಷಿಸಿದ ಬಳಿಕ ಬೋಟ್ ಅನ್ನು ಇನ್ನೊಂದು ಬೋಟ್ ನ ಸಹಾಯದಿಂದ ಗಂಗೊಳ್ಳಿ ಬಂದರಿಗೆ ಸಾಗಿಸಲಾಗಿದೆ.