ಉಡುಪಿ: ಸಹಕಾರ ಭಾರತಿ ಕಾರ್ಯಕರ್ತರು ಪ್ರತಿ ಗ್ರಾಮದಲ್ಲಿ ಸಹಕಾರ ವ್ಯವಸ್ಥೆ ಬಲಪಡಿಸಿ ಹೊಸ ಸಹಕಾರಿ ಆಯಾಮವನ್ನು ಸೃಷ್ಟಿಸಬೇಕು ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.
ಕಿನ್ನಿಮೂಲ್ಕಿಯ ಉಡುಪಿ ತಾಲೂಕು ಇಂಡಸ್ಟ್ರಿಯಲ್ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ಸಭಾಭವನದಲ್ಲಿ ನಡೆದ ಸಹಕಾರ ಭಾರತಿ ಜಿಲ್ಲಾ ಅಭ್ಯಾಸ ವರ್ಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಭಾರತೀಯ ಪರಿಚಯ ಪ್ರಥಮ ಅವಧಿಗೆ ಕುಂಬ್ಳೆಕರ್ ಮೋಹನ್ ಕುಮಾರ್, ಎರಡನೇ ಅವಧಿಗೆ ಮತ್ತು ಕಾರ್ಯ ಪದ್ಧತಿಯನ್ನು ಉಡುಪಿ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಜಿಲ್ಲಾ ಕಾರ್ಯವಾಹಕ ಯೋಗೀಶ್ ಶಿರಿಯಾರ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಎಸ್.ಕೆ, ರಾಜಪುರ ಸಾರಸ್ವತ ಕೋ ಆಪರೇಟಿವ್ ಲಿಮಿಟೆಡ್ ಕಾರ್ಕಳ ಇದರ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು, ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ತಾಲೂಕು ಇಂಡಸ್ಟ್ರಿಯಲ್ ಕೋಪರೇಟಿವ್ ಸೊಸೈಟಿ ಇದರ ಸಿಇಒ ರಾಜೇಶ ಹೆಗ್ಡೆ, ಸಹಕಾರ ಭಾರತೀಯ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾದ ಭಾರತಿ ಜಿ ಭಟ್, ಮಂಜುನಾಥ್, ಹಾಗೂ ಜಿಲ್ಲಾ ಪದಾಧಿಕಾರಿಗಳು, ತಾಲೂಕು ಪದಾಧಿಕಾರಿಗಳು ಹಾಗೂ ಸಹಕಾರಿಗಳು ಉಪಸ್ಥಿತರಿದ್ದರು.
ಸಹಕಾರ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು. ಸಹಕಾರ ಭಾರತೀಯ ಉಪಾಧ್ಯಕ್ಷ ಮಧುಸೂದನ್ ನಾಯಕ್ ವಂದಿಸಿದರು.