ಸಹಕಾರ ಬ್ಯಾಂಕ್: ಕ್ಲರ್ಕ್‌ ಹುದ್ದೆಗೆ ಅರ್ಜಿ ಆಹ್ವಾನ; ಮಾಸಿಕ ವೇತನ ₹25,000

ಮಹಾರಾಷ್ಟ್ರ ರಾಜ್ಯದ ಅಕೊಲಾ ಸಹಕಾರ ಬ್ಯಾಂಕ್‌ನಲ್ಲಿ ಖಾಲಿ ಇರುವ ಕಿರಿಯ ಕ್ಲರ್ಕ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು.

ಹುದ್ದೆಗಳ ಸಂಖ್ಯೆ: 100

ವಿದ್ಯಾರ್ಹತೆ : ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯಗಳಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವೇತನ: ತರಬೇತಿ ಅವಧಿಯಲ್ಲಿ ಮಾಸಿಕ ₹10 ಸಾವಿರ ವೇತನ ನೀಡಲಾಗುವುದು. ತರಬೇತಿಯಲ್ಲಿ ಯಶಸ್ವಿಯಾದವರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಆಗ ಮಾಸಿಕ ₹25 ಸಾವಿರ ಸೇರಿದಂತೆ ಇತರೆ ಭತ್ಯೆಗಳನ್ನು ನೀಡಲಾಗುವುದು.

ವಯಸ್ಸು: ಕನಿಷ್ಠ 21 ವರ್ಷ ತುಂಬಿರಬೇಕು, ಗರಿಷ್ಠ 30 ವರ್ಷ ಮೀರಿರಬಾರದು.

ವಯೋಮಿತಿ: ಅಂಗವಿಕಲರಿಗೆ 10 ವರ್ಷ, ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ.

ನೇಮಕಾತಿ: ಅಭ್ಯರ್ಥಿಗಳ ಆಯ್ಕೆಯು ಲಿಖಿತ ಪರೀಕ್ಷೆಯ ಮೂಲಕ ನಡೆಯಲಿದೆ. ಹೆಚ್ಚು ಅಂಕಗಳನ್ನು ಪಡೆದ ಅಭ್ಯರ್ಥಿಗಳ ಮೆರೀಟ್‌ ಲಿಸ್ಟ್‌ ತಯಾರಿಸಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು.

ಅರ್ಜಿ ಸಲ್ಲಿಕೆ ಹಾಗೂ ಇತರೆ ಮಾಹಿತಿಗಳಿಗೆ ಬ್ಯಾಂಕಿನ ವೆಬ್‌ಸೈಟ್‌ ನೋಡಬಹುದು.

ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 04-09-2021

ವೆಬ್‌ಸೈಟ್‌: https://ibpsonline.ibps.in/adccbjcaug21