ಯೋಗಿ ಆದಿತ್ಯನಾಥರಿಂದ ಅಯೋಧ್ಯೆಯಲ್ಲಿ ರಾಮಮಂದಿರ ಗರ್ಭಗೃಹ ನಿರ್ಮಾಣಕ್ಕೆ ಶಂಕುಸ್ಥಾಪನೆ

ಉತ್ತರಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ (ಜೂನ್ 1) ಅಯೋಧ್ಯೆಯಲ್ಲಿ ರಾಮಮಂದಿರ ಗರ್ಭಗೃಹದ ಪೂಜೆಯನ್ನು ನೆರವೇರಿಸಿ ಶಂಕುಸ್ಥಾಪನೆ ಮಾಡಿದರು. ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಹಾಗೂ ಅಯೋಧ್ಯೆಯ ಸಂತರು ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ರಾಮಮಂದಿರದ ನಿರ್ಮಾಣ ಕಾರ್ಯವು ಆಗಸ್ಟ್ 5, 2020 ರಂದು ಪ್ರಾರಂಭವಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದೇ ದಿನದಂದು ಶಂಕುಸ್ಥಾಪನೆ ಮಾಡಿದ್ದರು.

ಸೋಮವಾರ ಮುಂಜಾನೆ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ (SRJBTK), ರಾಮಮಂದಿರದ ಕಾರ್ಯಾಚರಣೆಯ ಉಸ್ತುವಾರಿ ಮತ್ತು ನಿರ್ಮಾಣದ ಮೇಲ್ವಿಚಾರಣೆಯ ಪ್ರಾಧಿಕಾರವು ರಾಮಮಂದಿರದ ನಿರ್ಮಾಣವು ಭರದಿಂದ ಸಾಗುತ್ತಿದೆ ಎಂದು ಮಾಹಿತಿ ನೀಡಿದೆ.

ಡಿಸೆಂಬರ್ 2023 ರಲ್ಲಿ, ಗರ್ಭಗುಡಿ ಮತ್ತು ರಾಮ ಲಲ್ಲಾ ವಿಗ್ರಹವನ್ನು ಹೊಂದಿರುವ ದೇವಾಲಯದ ಕೆಳಗಿನ ಮಹಡಿಯು ಪೂಜೆಗೆ ಸಿದ್ಧವಾಗಲಿದ್ದು, ಮಂದಿರ ನಿರ್ಮಾಣ ಕಾರ್ಯವು ಮುಂದುವರಿಯಲಿದೆ. ಸಂಪೂರ್ಣ ಮಂದಿರ ನಿರ್ಮಾಣ ಕಾರ್ಯವು 2025 ರ ವೇಳೆಗೆ ಪೂರ್ಣಗೊಳ್ಳುತ್ತದೆ ಎಂದು ಮಂದಿರ ಪ್ರಾಧಿಕಾರವು ತಿಳಿಸಿದೆ.

https://twitter.com/i/broadcasts/1YqGopdqZWgJv