udupixpress
Home Trending ಸಿಎಂ ಯಡಿಯೂರಪ್ಪನವರ ಬದಲಾವಣೆ ಖಚಿತ: ಶಹಾಪೂರ ಶಾಸಕ ಶರಣಬಸ್ಸಪ್ಪಗೌಡ

ಸಿಎಂ ಯಡಿಯೂರಪ್ಪನವರ ಬದಲಾವಣೆ ಖಚಿತ: ಶಹಾಪೂರ ಶಾಸಕ ಶರಣಬಸ್ಸಪ್ಪಗೌಡ

ಯಾದಗಿರಿ: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪನವರ ಬದಲಾಗಿ ಅವರ ಪುತ್ರ ಅಧಿಕಾರ ಚಲಾಯಿಸುತ್ತಿದ್ದಾರೆ. ಯಡಿಯೂರಪ್ಪಗೆ ವಯಸ್ಸಾಗಿದೆ, ಏನೂ ಮಾಡಲು ಆಗುವುದಿಲ್ಲ ಎಂದು ಮಾಜಿ ಸಚಿವ, ಶಹಾಪೂರ ಕಾಂಗ್ರೆಸ್‌ ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪೂರ ವ್ಯಂಗ್ಯವಾಡಿದರು.

ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಇಲಾಖೆಗಳಲ್ಲಿ ಸಿಎಂ ಪುತ್ರ ವಿಜಯೇಂದ್ರ ಹಸ್ತಕ್ಷೇಪ ನಡೆಸುತ್ತಿದ್ದಾರೆ. ಸಿಎಂ ಪುತ್ರನ ಹಸ್ತಕ್ಷೇಪ ಇದೇ ರೀತಿ ಮುಂದುವರೆದರೆ ಸಿಎಂ ಸ್ಥಾನ ಬದಲಾವಣೆ ಖಚಿತ. ಎಲ್ಲ ಶಾಸಕರು ಬಿಎಸ್‌ವೈ ಕೈಬಿಡುತ್ತಾರೆ ಎಂದರು.

ಬಿಜೆಪಿ ಹೈಕಮಾಂಡ್‌ ಎದುರು ಆಡಳಿತ ಪಕ್ಷದ ಕೆಲವು ಶಾಸಕರೇ ಸಿಎಂ ಸ್ಥಾನ ಬದಲಾವಣೆ ಬಗ್ಗೆ ಒತ್ತಾಯ ನಡೆಸಿದ್ದಾರೆ. ಸಚಿವ ರಮೇಶ್‌ ಜಾರಕಿಹೋಳಿ ಅವರು ಸಿಎಂ ಬದಲಾವಣೆ ಮಾಡಬೇಕೆಂದು ಹೇಳಿದ್ದಾರೆ ಎಂದರು.

 

error: Content is protected !!