ಹೊಸದಿಲ್ಲಿ: ಮುಂಬರುವ ಸಾರ್ವತ್ರಿಕ ಚುನಾವಣೆಗೆ ಪಕ್ಷದ ಪ್ರಣಾಳಿಕೆ ರಚಿಸಲು ಕಾಂಗ್ರೆಸ್ ತನ್ನ ಸಮಿತಿಯನ್ನು ರಚಿಸಿದೆ. ಕಾಂಗ್ರೆಸ್ ಬಿಡುಗಡೆಗೊಳಿಸಿದ 16 ಮಂದಿಯ ಪಟ್ಟಿಯಲ್ಲಿ ಸಿದ್ದರಾಮಯ್ಯ ಮಾತ್ರವಲ್ಲದೆ ಪಿ. ಚಿದಂಬರಂ, ಜೈರಾಂ ರಮೇಶ್, ಜಿಗ್ನೇಶ್ ಮೇವಾನಿ ಮೊದಲಾದವರು ಸಮಿತಿಯಲ್ಲಿ ಇರಲಿದ್ದಾರೆ.
ಕಾಂಗ್ರೆಸ್ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಅಧ್ಯಕ್ಷ ಪಿ.ಚಿದಂಬಂ , ಸಂಚಾಲಕ ಟಿ.ಎಸ್. ಸಿಂಗ್ ಡಿಯೊ, ಸಿದ್ದರಾಮಯ್ಯ, ಪ್ರಿಯಾಂಕ ಗಾಂಧಿ ವಾದ್ರ, ಆನಂದ್ ಶರ್ಮಾ, ಜೈರಾಂ ರಮೇಶ್, ಶಶಿ ತರೂರ್, ಗೈಖಂಗಮ್, ಗೌರವ್ ಗೊಗೊಯಿ, ಪ್ರವೀಣ್ ಚಕ್ರವರ್ತಿ, ಇಮ್ರಾನ್ ಪ್ರತಾಪ್ಗರಿ, ಕೆ.ರಾಜು, ಓಂಕಾರ್ ಸಿಂಗ್ ಮಾರ್ಕಂ, ರಂಜೀತ್ ರಂಜನ್, ಜಿಗ್ನೇಶ್ ಮೇವಾನಿ, ಗುರುದೀಪ್ ಇದ್ದಾರೆ.