ಸಿಎಂ ಪುತ್ರ ವಿರುದ್ಧ ಭ್ರಷ್ಟಾಚಾರದ ವರದಿ: ಪವರ್ ಟಿವಿ ಪ್ರಸಾರ ಸ್ಥಗಿತಗೊಳಿಸಿದ ಸರ್ಕಾರ

ಬೆಂಗಳೂರು: ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ಭ್ರಷ್ಟಾಚಾರ ಎಸಗಿದ್ದರು ಎನ್ನಲಾದ ವರದಿ ಮಾಡಿದ್ದಕ್ಕಾಗಿ ಕನ್ನಡ ಸುದ್ದಿ ವಾಹಿನಿ ‘ಪವರ್ ಟಿವಿ’ಯನ್ನು ಬಂದ್ ಮಾಡಲಾಗಿದೆ.

ಪವರ್ ಟಿವಿ ಮೇಲೆ ರೇಡ್ ಆಗಿದ್ದು, ಸಿಸಿಬಿ ಪೊಲೀಸರು, ಸರ್ಚ್ ವಾರಂಟ್ ಜೊತೆ ಬಂದಿದ್ದರು. ಅವರಿಗೆ ಬೇಕಾದ ಎಲ್ಲಾ ಡಾಕ್ಯುಮೆಂಟ್ ಗಳನ್ನು ಪಡೆದಿದ್ದಾರೆ. ನಮ್ಮ ಫೇಸ್ ಬುಕ್ ಲೈವನ್ನು ಸ್ಟಾಪ್ ಮಾಡಿದ್ದಾರೆ. ಚಾನೆಲ್ ನ್ನು ಬಂದ್ ಮಾಡಿದ್ದಾರೆ. 250 ಜನರು ಉದ್ಯೋಗಿಗಳಿರುವ ಚಾನೆಲನ್ನು ಬಂದ್ ಮಾಡಿದ್ದಾರೆ. ಇಂದು ಎಲ್ಲರೂ ಬೀದಿಗೆ ಬಂದಿದ್ದೇವೆ ಎಂದು ನಿರೂಪಕ ರಹಮಾನ್ ಹಾಸನ್ ಫೇಸ್ ಬುಕ್ ನಲ್ಲಿ ಅಳಲು ತೋಡಿಕೊಂಡಿದ್ದಾರೆ.