ಉಡುಪಿ: ಬನ್ನಂಜೆಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ‘ವಿ.ಎಸ್.ಆಚಾರ್ಯ’ ಬಸ್ ನಿಲ್ದಾಣಕ್ಕೆ, ವಿಷ್ಣು ಸೇಲ್ಸ್ ನ ಮಾಲೀಕ ವಿಷ್ಣುಪ್ರಸಾದ್ ಪಾಡಿಗಾರ್ ಮತ್ತು ಲಂಡನ್ ಟೈಮ್ಸ್ ನ ಮಾಲೀಕ ಸುಭಾಷ್ ಇವರು ಉಡುಗೊರೆ ನೀಡಿದ ಮೂರು ಗಡಿಯಾರಗಳನ್ನು ಸಾರಿಗೆ ನಿಗಮದ ಮಂಗಳೂರು ವಿಭಾಗದ ನಿಯಂತ್ರಣಾಧಿಕಾರಿಗಳಾದ ರಾಜೇಶ್ ಶೆಟ್ಟಿ ಇವರಿಗೆ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಪರವಾಗಿ ಮಠದ ದಿವಾನರಾದ ವರದರಾಜ ಭಟ್ ರವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ವಿಭಾಗ ಸಂಚಲನಾಧಿಕಾರಿ ಮರಿಗೌಡ, ಉಡುಪಿ ಘಟಕ ವ್ಯವಸ್ಥಾಪಕ ಶಿವರಾಮ ನಾಯ್ಕ್, ಬನ್ನಂಜೆ ನಿಲ್ದಾಣ ಮೇಲ್ವಿಚಾರಕ ಬಿ.ಸಿ.ಪಾವಸ್ಕರ್ ಉಪಸ್ಥಿತರಿದ್ದರು.