ಸಾಣೂರಿನಲ್ಲಿ ಸ್ವಚ್ಛತಾ ಸಾಪ್ತಾಹಿಕ ಆಂದೋಲನ; ಶ್ರಮದಾನದ ಮೂಲಕ ರಸ್ತೆ ಬದಿ ಸ್ವಚ್ಛತೆ

ಸಾಣೂರು ಯುವಕ ಮಂಡಲದ ವತಿಯಿಂದ ದೇಶದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಸಂಭ್ರಮದ ಪ್ರಯುಕ್ತ ಕ್ಲೀನ್ ಇಂಡಿಯಾ ಪ್ಲಾಸ್ಟಿಕ್ ಮುಕ್ತ ಪ್ರದೇಶ ಕಾರ್ಯಕ್ರಮದಡಿ ಭಾನುವಾರ ಸ್ವಚ್ಛತಾ ಸಾಪ್ತಾಹಿಕ ಆಂದೋಲನ ನಡೆಸಲಾಯಿತು.

ಹತ್ತೊಂಬತ್ತನೆ ವಾರದ ಸ್ವಚ್ಛತಾ ಸಾಪ್ತಾಹಿಕವನ್ನು ಗಾಡಿದಕೊಟ್ಯ ಸೇತುವೆ ಬಳಿಯಿಂದ ಆರಂಭಿಸಿ ಸಾಣೂರು ಗುತ್ತುರಸ್ತೆ ಸಂಪರ್ಕ ರಸ್ತೆಯವರೆಗೆ ಸ್ವಚ್ಛತೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಶೆಟ್ಟಿ, ಸಾಣೂರು ಯುವಕ ಮಂಡಲದ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಮೋಹನ್ ಶೆಟ್ಟಿ, ಕೋಶಾಧಿಕಾರಿ ರಾಜೇಶ್ ಪೂಜಾರಿ, ಜೊತೆ ಕಾರ್ಯದರ್ಶಿ ಪ್ರಕಾಶ್ ರಾವ್ , ಕೋಶಾಧಿಕಾರಿ ರಾಜೇಶ್ ಪೂಜಾರಿ, ಮಾಜಿ ಅಧ್ಯಕ್ಷರಾದ ಪ್ರಕಾಶ್ ಮಡಿವಾಳ, ಜಗದೀಶ್ ಕುಮಾರ್ ಪದಾಧಿಕಾರಿಗಳಾದ ಜಯನ್ ಶೆಟ್ಟಿ ಪ್ರಸನ್ನ ಆಚಾರ್ಯ, ರಮೇಶ್ ಆಚಾರ್ಯ, ಶ್ರೀನಿವಾಸ್ ಆಚಾರ್ಯ, ಸದಾನಂದ್ ಪೂಜಾರಿ ವಿದ್ಯಾನಂದ್ ಕೋಟ್ಯಾನ್, ಆರೋಗ್ಯ ಇಲಾಖೆಯ ಕಾರ್ಯಕರ್ತೆ ಅಶ್ವಿನಿ, ಶಿರ್ಲಾಲು SLRM ಘಟಕದ ಸಿಬ್ಬಂದಿ ಸುನೀತಾ ಮೊದಲಾದವರು ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡಿದರು.

ಸ್ವಚ್ಛತಾ ಆಂದೋಲನದ ಮೂಲಕ‌ ಒಟ್ಟು 7 ಚೀಲ ತ್ಯಾಜ್ಯ ಸಂಗ್ರಹಿಸಲಾಗಿದೆ.