ಹಸಿರೇ ಉಸಿರು ತಂಡವನ್ನು ಭೇಟಿ ಮಾಡಿದ ಸಚಿವ ವಿ. ಸುನಿಲ್ ಕುಮಾರ್

ಕಾರ್ಕಳ: ಸ್ವಚ್ಛತೆ ಎಂಬುದು ಕೆಲಸವಲ್ಲ ನಮ್ಮ ಕರ್ತವ್ಯ ಎಂದು ಪ್ರತಿ ಭಾನುವಾರದಂದು ತಮ್ಮೂರಿನ ದುರ್ಗ ಗ್ರಾಮದ “ಹಸಿರೇ ಉಸಿರು” ತಂಡವು ಈ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದೆ. ಸ್ವಚ್ಛ ಊರು ಸ್ವಚ್ಛ ಗ್ರಾಮ ಎಂಬ ಧ್ಯೇಯದೊಂದಿಗೆ 91ನೇ ವಾರದ ಅಭಿಯಾನವು ಡಿ. 26 ರಂದು ತೆಳ್ಳಾರು ಪಲಾಯಿ ಬಾಕ್ಯಾರು ಶಾಲಾ ಆವರಣದಲ್ಲಿ ನಡೆಯಿತು.

ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಭೇಟಿ ನೀಡಿ ಈ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ತಂಡವು ಶಾಲಾ ಸುತ್ತಮುತ್ತ, ದೇವಾಲಯ, ರಸ್ತೆ ಬದಿ ಮುಂತಾದ ಕಡೆಗಳಲ್ಲಿ ಸ್ವಚ್ಛತೆ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕೇವಲ ಯುವಕ ಯುವತಿಯರು ಮಾತ್ರವಲ್ಲದೆ ಸ್ವಇಚ್ಛೆಯಿಂದ ಪುಟಾಣಿ ಮಕ್ಕಳು ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇತರ ಮಕ್ಕಳಿಗೆ ಮಾದರಿಯಾಗಿದ್ದಾರೆ.