ಬಿಜೆಪಿ ಯುವಮೋರ್ಚಾ ಕಾಪು ಮಂಡಲದಿಂದ ಸ್ವಚ್ಛ ಭಾರತ ಕಾರ್ಯಕ್ರಮ

ಕಾಪು: ಬಿಜೆಪಿ ಕಾಪು ಮಂಡಲ ಹಾಗೂ ಕಾಪು ಬಿಜೆಪಿ ಯುವಮೋರ್ಚಾದ ವತಿಯಿಂದ ಸೇವಾಸಪ್ತಾಹದ ಅಭಿಯಾನದಡಿ ಗಾಂಧಿ ಜಯಂತಿ ಅಂಗವಾಗಿ ಪಾಂಗಾಳ ಬಸ್ ತಂಗುದಾಣದ ಬಳಿ ಇಂದು ಸ್ವಚ್ಛ ಭಾರತ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಕಾಪು ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್, ಕಾಪು ಕ್ಷೇತ್ರ ಪ್ರಭಾರಿಗಳಾದ ಯಶ್ ಪಾಲ್ ಸುವರ್ಣ, ಪಕ್ಷದ ಹಿರಿಯರಾದ ಸುರೇಶ್ ಶೆಟ್ಟಿ ಗುರ್ಮೆ, ಯುವ ಮೋರ್ಚಾ ಕಾಪು ಅಧ್ಯಕ್ಷ ಸಚಿನ್ ಸುವರ್ಣ ಪಿತ್ರೋಡಿ, ಹಿಂದುಳಿದ ಮೋರ್ಚಾ ಅಧ್ಯಕ್ಷ ಸಂತೋಷ್ ಕುಮಾರ್ ಮೂಡುಬೆಳ್ಳೆ, ಕುರ್ಕಾಲು ಮಹಾಶಕ್ತಿ ಕೇಂದ್ರ ಅಧ್ಯಕ್ಷ ವಿಶ್ವನಾಥ್ ಪೂಜಾರಿ.

ಜಿಲ್ಲಾ ಯುವ ಮೋರ್ಚಾ ಪದಾಧಿಕಾರಿಗಳಾದ ಪ್ರವೀಣ್ ಕುಮಾರ್, ಯತೀಶ್ ಕುಮಾರ್ ಮಟ್ಟು, ಅಭಿರಾಜ್ ಸುವರ್ಣ, ಕ್ಷೇತ್ರ ಯುವ ಮೋರ್ಚಾ ಕಾರ್ಯದರ್ಶಿ ಪ್ರಸನ್ನ ಕಾಮತ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾಪು ಕ್ಷೇತ್ರ ಯುವ ಮೋರ್ಚಾ ಕಾರ್ಯದರ್ಶಿ ಸೋನು ಪಾಂಗಾಳ ಕಾರ್ಯಕ್ರಮ ನಿರೂಪಿಸಿದರು.