ಕೊಡವೂರು: ಇಲ್ಲಿನ ಪರಿಸರವನ್ನು ಪ್ರತಿನಿತ್ಯ ಸ್ವಚ್ಛ ಮಾಡುವುದರ ಜೊತೆಗೆ ಎಲ್ಲರ ಮನೆಯ ಕಸವನ್ನು ಅಚ್ಚುಕಟ್ಟಾಗಿ ವಿಲೇವಾರಿ ಮಾಡುವ ನಗರ ಸಭೆಯ ವಾಹನದ ಚಾಲಕರು ಮತ್ತು ಲೋಡರ್ ಗಳನ್ನು ಕೊಡವೂರಿನ ನಾಗರಿಕರ ಪರವಾಗಿ ಕೊಡವೂರಿನ ಯುವಕ ಸಂಘದಲ್ಲಿ ಸನ್ಮಾನಿಸಲಾಯಿತು.
ಪೌರಕಾರ್ಮಿಕರಾದ ಸಂದೀಪ್, ರಮೇಶ್, ಶಾಮ ಇವರಿಗೆ ಶಾಲು ಹೊದೆಸಿ ಗೌರವಿಸಲಾಯಿತು.
ನಗರಸಭಾ ಸದಸ್ಯ ವಿಜಯ್ ಕೊಡವೂರು, ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ್ ಶೆಟ್ಟಿಗಾರ್, ಸದಸ್ಯರಾದ ರಾಘವೇಂದ್ರ ರಾವ್, ವರ್ಷ ನಾರಾಯಣ್ ರಾವ್, ವಾಣಿ, ವಿನಯ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಭಾತ್ ಕೊಡವೂರು ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.