ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸಹಿತ ಕೆಲ ಭಾಗಗಳಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ 15 ದಿನಗಳ ಕಾಲ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂಬ ಕಾಲೇಜು ಶಿಕ್ಷಣದ ಸುತ್ತೋಲೆ ವೈರಲ್ ಆಗಿದೆ. ಇದು ಸಂಪೂರ್ಣ ಫೇಕ್ (ಸುಳ್ಳು) ಎಂದು ಶಿಕ್ಷಣ ಇಲಾಖೆ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಕಾಲೇಜು ಶಿಕ್ಷಣ ನಿರ್ದೇಶಕರು ಮಾ.15ರಿಂದ 30ರವರೆಗೆ ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶಿಸಿದ್ದಾರೆ ಎಂಬ ಸುದ್ದಿ ಕೆಲ ಗಂಟೆಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಕೆಜಿಸಿಟಿಎ ಅಧ್ಯಕ್ಷರಾದ ಡಾ.ಟಿ.ಎಂ.ಮಂಜುನಾಥ ಇಲಾಖೆ ಆಯುಕ್ತರು, ನಿರ್ದೇಶಕರ ಗಮನಕ್ಕೆ ತಂದಿದ್ದಾರೆ. ಕೂಡಲೇ ಪರಿಶೀಲಿಸಿದ ಅಧಿಕಾರಿಗಳು ಈ ಸುತ್ತೋಲೆ ಫೇಕ್ ಆಗಿದ್ದು, ಈ ಬಗ್ಗೆ ಈಗಾಗಲೇ ಸೈಬರ್ ಕ್ರೈಂಗೆ ದೂರುಸ ಲ್ಲಿಸಿರುವುದಾಗಿ ತಿಳಿಸಿದ್ದಾರೆ.
ದಯಮಾಡಿ ಇಂತಹ ಫೇಕ್ ಸುತ್ತೋಲೆಗಳನ್ನು ಅಧ್ಯಾಪಕರು ನಂಬಬಾರದು. ಜತೆಗೆ ಯಾರಿಗೂ ಅಥವಾ ಯಾವುದೇ ಗ್ರೂಪ್ ಗಳಿಗೂ ಕಳುಹಿಸಬೇಡಿ ಎಂದು ಮನವಿ ಮಾಡಿದ್ದಾರೆ.