ಚುನಾವಣಾ ಕರ್ತವ್ಯಕ್ಕೆ ತೆರಳುವ ಸಿಬ್ಬಂದಿಗೆ ವಾಹನ ವ್ಯವಸ್ಥೆ

ಏಪ್ರಿಲ್ 1 8ರಂದು ನಡೆಯುವ ಲೋಕಸಭಾ ಕ್ಷೇತ್ರದ  ಚುನಾವಣೆಗೆ ಸಂಬಂದಿಸಿದಂತೆ ಈಗಾಗಲೇ ಚುನಾವಣಾ ಕೆಲಸ ಕಾರ್ಯ ನಿರ್ವಹಿಸಲು ಜಿಲ್ಲೆಯ ವಿವಿಧ ತಾಲೂಕುಗಳಿಂದ ಅಧಿಕಾರಿ /ಸಿಬ್ಬಂದಿಗಳನ್ನು ಪಿ.ಆರ್.ಓ, ಎಪಿಆರ್ ಓ, ಪಿಓ ಆಗಿ ನಿಯೋಜಿಸಿ ಆದೇಶಿಸಲಾಗಿದ್ದು, ಈ ಸಿಬ್ಬಂದಿಗಳು ಏಪ್ರಿಲ್ 17 ರಂದು ತಮಗೆ ನಿಯೋಜಿಸಿರುವ ವಿಧಾನಸಭಾ ಕ್ಷೆತ್ರದ ಮಸ್ಟರಿಂಗ್ ಕೇಂದ್ರದಲ್ಲಿ ಹಾಜರಾಗಬೇಕಿದೆ.

ವಿವಿಧ ತಾಲೂಕುಗಳಿಂದ ಚುನಾವಾಣ ಕರ್ತವ್ಯಕ್ಕೆ ತೆರಳುವ ಸಿಬ್ಬಂದಿಗಳನ್ನು ಮಸ್ಟರಿಂಗ್ ಕೇಂದ್ರಗಳಿಗೆ ಕರೆದುಕೊಂಡು ಹೋಗಲು ಬಸ್ ವ್ಯವಸ್ಥೆ ಮಾಡಲಾಗಿದೆ.

ಎಲ್ಲಾ ಬಸ್ ಗಳು ಏಪ್ರಿಲ್ 17 ರಂದು ಬೆಳಗ್ಗೆ 6.30 ಕ್ಕೆ ಹೊರಡಲಿದ್ದು, ನಂತರ ಬಸ್ ವ್ಯವಸ್ಥೆ ಇರುವುದಿಲ್ಲ. ಹಾಗೂ ಚುನಾವಣೆ ಮುಗಿದು ಮಸ್ಟರಿಂಗ್ ಕೇಂದ್ರದಲ್ಲಿ ಇವಿಎಂ  ಮತಯಂತ್ರಗಳನ್ನು ಹಸ್ತಾಂತರಿಸಿದ ನಂತರ, ವಾಪಸ್ ಕೇಂದ್ರಸ್ಥಾನಗಳಿಗೆ ಹೋಗಲು       ಡಿ ಮಸ್ಟರಿಂಗ್ ಕೇಂದ್ರದಲ್ಲಿ ಬಸ್ ವ್ಯವಸ್ಥೆ ಮಾಡಲಾಗಿದೆ.

ಬೈಂದೂರು ನಿಂದ  ವಿವಿದೆಡೆ ತೆರಳುವ  ಸಿಬ್ಬಂದಿಗೆ ಬೈಂದೂರು ತಾಲೂಕು ಕಚೇರಿಯಿಂದ ಬಸ್ ಹೊರಡಲಿದೆ,  ಕುಂದಾಪುರದಿಂದ ವಿವಿದೆಡೆ ತೆರಳುವ  ಸಿಬ್ಬಂದಿಗೆ , ಭಂಡಾರ್‍ಕರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಸ್ ನಿಲ್ಲಲಿದೆ. ಉಡುಪಿಯಿಂದ ವಿವಿದೆಡೆ ತೆರಳುವ  ಸಿಬ್ಬಂದಿಗೆ, ಸೈಂಟ್ ಸಿಸಿಲಿಯಾ ಶಿಕ್ಷಣ ಸಂಸ್ಥೆ ಬ್ರಹ್ಮಗಿರಿ ಮತ್ತು ಸಿಟಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಲಿದೆ.  ಕಾಪು ನಿಂದ ವಿವಿದೆಡೆ ತೆರಳುವ  ಸಿಬ್ಬಂದಿಗೆ  ದಂಡತೀರ್ಥ ಪದವಿ ಪೂರ್ವ ಕಾಲೇಜು  ಉಳಿಯಾರಗೋಳಿಯಲ್ಲಿ ಬಸ್ ನಿಲ್ಲಲಿದೆ. ಕಾರ್ಕಳ ದಿಂದ ವಿವಿದೆಡೆ ತೆರಳುವ  ಸಿಬ್ಬಂದಿಗೆ, ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾಬೆಟ್ಟು ಕಾರ್ಕಳ ಮತ್ತು ಬಸ್ ನಿಲ್ದಾಣ ಬಂಡಿಮಠ ಕಾರ್ಕಳ ದಲ್ಲಿ ಬಸ್ ನಿಲುಗಡೆಯಾಗಲಿದೆ.

ಚುನಾವಣಾ ಕರ್ತವ್ಯಕ್ಕೆ ತೆರಳುವ ಸಿಬ್ಬಂದಿಗಳು ಈ ಬಸ್ ಗಳ ಮೂಲಕ  ತಮಗೆ ನಿಯೋಜಿಸಲಾದ ಮಸ್ಟರಿಂಗ್ ಕೇಂದ್ರಗಳಿಗೆ ತೆರಳಲು ಪ್ರಯೋಜನ ಪಡೆಯುವಂತೆ ಜಿಲ್ಲಾ ಚುನಾವಣಾದಿಕಾರಿ ಹಾಗೂ  ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.