ಯೇಸು ಕ್ರಿಸ್ತ ಜನಿಸಿದ ದಿನವನ್ನು ಕ್ರಿಸ್‌ಮಸ್ ಹಬ್ಬವನ್ನಾಗಿ ಪ್ರತಿವರ್ಷ ಆಚರಿಸಲಾಗುತ್ತದೆ. ಈ ದಿನದಂದು ಜನರು ಚರ್ಚ್ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವುದರೊಂದಿಗೆ ಮನೆಯನ್ನು ಕ್ರಿಸ್ಮಸ್ ಟ್ರೀ ಹಾಗೂ ಹೂವುಗಳಿಂದ ಅಲಂಕರಿಸಲಾಗುತ್ತದೆ. ಸಂಬಂಧಿಕರು, ಸ್ನೇಹಿತರೆಲ್ಲಾ ಒಟ್ಟಾಗಿ ಸೇರಿ ವಿಶೇಷ ಆಹಾರಗಳನ್ನು ಮಾಡಿ ಸವಿಯುತ್ತಾರೆ. ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ.
ಪ್ರತಿ ವರ್ಷ ಡಿಸೆಂಬರ್ 25 ರಂದು ಪ್ರಪಂಚದಾದ್ಯಂತ ಜನರು ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಗುತ್ತದೆ. ಇಸ್ರೇಲ್, ಆಸ್ಟ್ರೇಲಿಯಾ, ಅಮೆರಿಕ, ಬ್ರಿಟನ್, ಜಪಾನ್, ಚೈನಾ, ಈಜಿಪ್ಟ್, ರಷ್ಯಾ, ರೊಮೊನಿಯಾ, ಭಾರತ ಸೇರಿದಂತೆ ಬಹುತೇಕ ದೇಶಗಳು ಪ್ರತಿವರ್ಷ ಕ್ರಿಸ್‌ಮಸ್ ಹಬ್ಬವನ್ನು ಆಚರಿಸುತ್ತವೆ. ಕ್ರಿಸ್‌ಮಸ್ ಹಿಂದಿನ ದಿನ, ಅಂದರೆ ಡಿಸೆಂಬರ್ 24ನ್ನು ಕ್ರಿಸ್‌ಮಸ್ ಈವ್ ಎಂದು ಆಚರಿಸಲಾಗುತ್ತದೆ. ಇದು ಸಂತೋಷ, ಸಾಮರಸ್ಯದೊಂದಿಗೆ ಆಚರಿಸಲಾಗುತ್ತದೆ.

ಯೇಸು ಕ್ರಿಸ್ತ ಜನಿಸಿದ ದಿನವನ್ನು ಕ್ರಿಸ್‌ಮಸ್ ಹಬ್ಬವನ್ನಾಗಿ ಪ್ರತಿವರ್ಷ ಆಚರಿಸಲಾಗುತ್ತದೆ. ಈ ದಿನದಂದು ಜನರು ಚರ್ಚ್ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವುದರೊಂದಿಗೆ ಮನೆಯನ್ನು ಕ್ರಿಸ್ಮಸ್ ಟ್ರೀ ಹಾಗೂ ಹೂವುಗಳಿಂದ ಅಲಂಕರಿಸಲಾಗುತ್ತದೆ. ಸಂಬಂಧಿಕರು, ಸ್ನೇಹಿತರೆಲ್ಲಾ ಒಟ್ಟಾಗಿ ಸೇರಿ ವಿಶೇಷ ಆಹಾರಗಳನ್ನು ಮಾಡಿ ಸವಿಯುತ್ತಾರೆ.



ಕ್ರಿಸ್ಮಸ್ ಹಬ್ಬ ಯಾವಾಗ?
ಬಹುತೇಕ ಕ್ರಿಶ್ಚಿಯನ್ನರು ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಡಿಸೆಂಬರ್ 25 ರಂದು ಕ್ರಿಸ್ಮಸ್ ಹಬ್ಬವನ್ನು ಆಚರಿಸುತ್ತಾರೆ. ಜೀಸಸ್ ಯಾವಾಗ ಜನಿಸಿದರು ಎಂಬುದಕ್ಕೆ ಇತರೆ ಸಿದ್ಧಾಂತಗಳಿವೆ, ಆದರೆ ನಾಲ್ಕನೇ ಶತಮಾನದ ಆರಂಭದಲ್ಲಿ ಅಂದರೆ ಡಿಸೆಂಬರ್ 25ರಂದು ಅಧಿಕೃತ ದಿನಾಂಕವಾಗಿ ನಿರ್ಧರಿಸಲಾಗಿದೆ. ಹಾಗಾಗಿ ಪ್ರತಿವರ್ಷ ಡಿಸೆಂಬರ್ 25ರಂದು ಪ್ರತಿವರ್ಷ ಆಚರಿಸಲಾಗುತ್ತಿದೆ.


ಕ್ರಿಸ್‌ಮಸ್ ಹಬ್ಬದ ಮಹತ್ವ
ಕ್ರಿಸ್‌ಮಸ್ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಯೇಸುವಿನ ಜನ್ಮದಿನದಂದು ಈ ಪವಿತ್ರ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಗುತ್ತದೆ. ದೇವರ ಮಗ ಮತ್ತು ಮಾನವೀಯತೆಯ ವಿಮೋಚಕ ಎಂದು ಪೂಜಿಸಲ್ಪಟ್ಟ ಯೇಸುವಿನ ಜನ್ಮವನ್ನು ಆಚರಿಸುವ, ಗೌರವಿಸುವ ಪವಿತ್ರ ದಿನವಾಗಿದೆ. ಈ ದಿನದಂದು ಜನರು ಚರ್ಚ್ಗಳಿಗೆ ಭೇಟಿ ನೀಡಿ, ಪ್ರಾರ್ಥನೆ ಮಾಡುತ್ತಾರೆ. ಕ್ರಿಸ್ಮಸ್ ಡಿ. 25 ರಂದು ಗ್ರೆಗೋರಿಯನ್ ಕ್ಯಾಲೆಂಡರ್ ಮೂಲಕ ಆಚರಿಸಲಾಗುತ್ತದೆ. ಇದು ರೋಮನ್ ಕ್ಯಾಲೆಂಡರ್ನಲ್ಲಿ ಚಳಿಗಾಲದ ಅಯನ ಸಂಕ್ರಾಂತಿಯ ಸಾಂಪ್ರದಾಯಿಕ ದಿನಾಂಕವಾಗಿದೆ.


ಕ್ರಿಸ್ಮಸ್ ಪದವು “ಮಾಸ್ ಆಫ್ ಕ್ರೈಸ್ಟ್” ಎಂಬ ಪದದಿಂದ ಹುಟ್ಟಿಕೊಂಡಿದೆ. ಮೊದಲ ಕ್ರಿಶ್ಚಿಯನ್ ಚಕ್ರವರ್ತಿ ರೋಮನ್ ಚಕ್ರವರ್ತಿ ತನ್ನ ಆಳ್ವಿಕೆಯಲ್ಲಿ ಕ್ರಿಸ್ಮಸ್ನ್ನು ಮೊಟ್ಟಮೊದಲ ಬಾರಿಗೆ ಆಚರಿಸಿದನು.

ಈ ದಿನದಂದು ಜನರು ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡುವಿಕೆಯೊಂದಿಗೆ ಹಬ್ಬವನ್ನು ಆಚರಿಸಲಾಗುತ್ತದೆ. ಕ್ಯಾರೋಲಿಂಗ್, ಕ್ರಿಸ್ಮಸ್ ಟ್ರೀ ಅಲಂಕರಣ, ಮತ್ತು ಸಾಂಟಾ ಕ್ಲಾಸ್ ಸಾಕಷ್ಟು ಜನಪ್ರಿಯವಾಗಿರುವ ಕೆಲವು ಆಚರಣೆಗಳಾಗಿವೆ.
ಸಾಂತಾಕ್ಲಾಸ್ ಎಂಬ ಕಲ್ಪನೆ ಹೇಗೆ ಹುಟ್ಟಿಕೊಂಡಿತು?

ಅನೇಕ ದೇಶಗಳಲ್ಲಿ, ಕ್ರಿಸ್ಮಸ್ ಮುನ್ನಾದಿನದಂದು ಸಾಂತಾಕ್ಲಾಸ್ ಬರುವುದನ್ನು ಮಕ್ಕಳು ಕುತೂಹಲದಿಂದ ಕಾಯುತ್ತಾರೆ. ಸಾಂತಾಕ್ಲಾಸ್ ನ ಕಲ್ಪನೆಯು ಬಹಳ ಹಿಂದಿನದ್ದು ಎಂದು ಹೇಳಲಾಗುತ್ತದೆ. ಜೊತೆಗೆ ಸೇಂಟ್ ನಿಕೋಲಸ್ ಎಂಬ ವ್ಯಕ್ತಿಯಿಂದ ಈ ಪದ್ಧತಿ ಸ್ಫೂರ್ತಿ ಪಡೆಡಿದ್ದು ಎಂದು ಇತಿಹಾಸ ಹೇಳುತ್ತದೆ. ಅವರು ವಿಶೇಷವಾಗಿ ಮಕ್ಕಳನ್ನು ಪ್ರೀತಿಯಿಂದ ಕಾಣಲು ಈ ರೀತಿ ಮಾಡುತ್ತಿದ್ದರೂ ಎಂದು ಕೂಡ ಹೇಳಲಾಗುತ್ತದೆ. ಇನ್ನು ಕೆಲವು ಕಥೆಗಳ ಪ್ರಕಾರ ಸಾಂತಾ ಮೂವರು ಬಡ ಸಹೋದರಿಯರಿಗೆ ಚಿನ್ನ ನೀಡುವ ಮೂಲಕ ಸಹಾಯ ಮಾಡಿದ್ದರು ಹಾಗಾಗಿ ಈ ರೀತಿ ಆಚರಣೆ ರೂಢಿಯಲ್ಲಿದೆ ಎಂದು ಹೇಳಲಾಗುತ್ತದೆ.

ಒಟ್ಟಿನಲ್ಲಿ ಈ ಹಬ್ಬ ಕುಟುಂಬಗಳು ಒಟ್ಟಿಗೆ ಸೇರಲು ಮತ್ತು ವಿಶೇಷ ರೀತಿಯಲ್ಲಿ ಮಾಡಿದ ಭೋಜನವನ್ನು ಆನಂದಿಸಲು ಮತ್ತು ಉಡುಗೊರೆಗಳನ್ನು ಹಂಚಿಕೊಳ್ಳುವ ಸಮಯವಾಗಿದೆ. ಇನ್ನು ಈ ದಿನ ಉಡುಗೊರೆಗಳನ್ನು ನೀಡುವುದು ಮತ್ತು ಪಡೆಯುವುದು ಪ್ರೀತಿ ಮತ್ತು ಕಾಳಜಿಯನ್ನು ತೋರಿಸುವ ಒಂದು ಮಾರ್ಗವಾಗಿದೆ ಎಂದು ಹೇಳಲಾಗುತ್ತದೆ.
















