ಮಣಿಪಾಲ: ಮಾಹೆ ಹೋಟೇಲ್ ಅಡ್ಮಿನಿಸ್ಟ್ರೇಷನ್‌ ಕಾಲೇಜಿನಲ್ಲಿ ಕ್ರಿಸ್ ಮಸ್ ಕೇಕ್ ಮಿಶ್ರಣ ತಯಾರಿಕೆ

ಮಣಿಪಾಲ: ಮಾಹೆಯ ವೆಲ್‌ಕಮ್ ಗ್ರೂಪ್‌ ಗ್ರಾಜುಯೇಟ್‌ ಸ್ಕೂಲ್‌ ಆಫ್‌ ಹೋಟೆಲ್‌ ಅಡ್ಮಿನಿಸ್ಟ್ರೇಷನ್‌ ನಲ್ಲಿ ಕ್ರಿಸ್ ಹಬ್ಬದ ಕೇಕ್ ಗಾಗಿ ಮದ್ಯದಲ್ಲಿ ಡ್ರೈ ಫ್ರೂಟ್ಸ್‌ ಮಿಶ್ರಣ ಮಾಡುವ ವಾರ್ಷಿಕ ಆಚರಣೆಯನ್ನು ನಡೆಸಲಾಯಿತು.

ಮುಖ್ಯ ಅತಿಥಿಗಳಾಗಿ ಮಾಹೆ ಟ್ರಸ್ಟ್ ನ ಟ್ರಸ್ಟೀ ಶ್ರೀಮತಿ ವಸಂತಿ ಆರ್.ಪೈ, ಮಾಹೆ ಕುಲಪತಿ ಡಾ. ಎಚ್.ಎಸ್ ಬಲ್ಲಾಳ್ ಮತ್ತು ಇಂದಿರಾ ಬಲ್ಲಾಳ್, ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.ವೆಂಕಟೇಶ್ ಮತ್ತು ಶ್ರೀಮತಿ ಕುಸುಮಾ ವೆಂಕಟೇಶ್, ರಿಜಿಸ್ಟ್ರಾರ್ ಡಾ. ನಾರಾಯಣ್ ಸಭಾಹಿತ್ ಹಾಗೂ ಮಾಹೆಯ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

17 ನೇ ಶತಮಾನದಿಂದಲೂ ಕ್ರಿಸ್‌ಮಸ್ ಕೇಕ್‌ಗಳು ಇಂಗ್ಲಿಷ್ ಸಂಪ್ರದಾಯದ ಭಾಗವಾಗಿದೆ. ಕ್ರಿಸ್ ಮಸ್ ಹಬ್ಬಕ್ಕೂ ಒಂದು ತಿಂಗಳ ಮುನ್ನ ಮದ್ಯದ ಜೊತೆಗೆ ದೊಡ್ಡ ಪ್ರಮಾಣದಲ್ಲಿ ಒಣಗಿದ ಹಣ್ಣುಗಳು, ಬೀಜಗಳು ಮತ್ತು ಮಸಾಲೆಗಳನ್ನು ಒಟ್ಟಿಗೆ ಮಿಶ್ರಣ ಮಾಡಿ ನೆನೆಸಿ ಇದರಿಂದ ಕೇಕ್ ತಯಾರಿಸಲಾಗುತ್ತದೆ. ಈ ಕೇಕಿಗೆ ವಿಶಿಷ್ಟ ಸುವಾಸನೆ, ವಿನ್ಯಾಸ ಮತ್ತು ರುಚಿ ಇರುತ್ತದೆ. ಕ್ರಿಸ್ ಮಸ್ ಹಬ್ಬದ ಪ್ಲಮ್ ಕೇಕಿಗೆ ಭಾರೀ ಬೇಡಿಕೆ ಇದೆ.