Christmas 2024: ಕ್ರಿಸ್‌ಮಸ್ ಹಬ್ಬದ ಇತಿಹಾಸ, ಮಹತ್ವ ಮತ್ತು ಆಚರಿಸುವ ವಿಧಾನಗಳ ಕುರಿತು ಮಾಹಿತಿ ಇಲ್ಲಿವೆ

ಯೇಸು ಕ್ರಿಸ್ತ ಜನಿಸಿದ ದಿನವನ್ನು ಕ್ರಿಸ್‌ಮಸ್‌ ಹಬ್ಬವನ್ನಾಗಿ ಪ್ರತಿವರ್ಷ ಆಚರಿಸಲಾಗುತ್ತದೆ. ಇದಲ್ಲದೇ ಪರಸ್ಪರ ಕ್ರಿಸ್ಮಸ್ ಕಾರ್ಡ್‌, ಉಡುಗೊರೆ ನೀಡುವುದು, ಚರ್ಚ್​ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವುದು ಜೊತೆಗೆ ಮನೆಯನ್ನು ಕ್ರಿಸ್​ಮಸ್​ ಟ್ರೀ ಹಾಗೂ ಹೂವುಗಳಿಂದ ಆಲಂಕರಿಸಲಾಗುತ್ತದೆ.

ಕ್ರಿಸ್‌ಮಸ್‌ ಹಬ್ಬದ ಸಂಭ್ರಮ ಸಡಗರಗಳು ಈಗಾಗಲೇ ಪ್ರಾರಂಭವಾಗಿದ್ದು, ಕ್ರಿಶ್ಚಿಯನ್ನರಷ್ಟೇ ಅಲ್ಲ, ಪ್ರಪಂಚದ ಪ್ರತಿಯೊಂದು ಭಾಗದ ಜನರು ಸಂಭ್ರಮದಿಂದ ಆಚರಿಸುತ್ತಾರೆ. ಈ ದಿನದ ವಿಶೇಷತೆ ಎಂದರೆ ಯೇಸು ಕ್ರಿಸ್ತ ಜನಿಸಿದ ದಿನವನ್ನು ಕ್ರಿಸ್‌ಮಸ್‌ ಹಬ್ಬವನ್ನಾಗಿ ಪ್ರತಿವರ್ಷ ಆಚರಿಸುವುದು. ಇದಲ್ಲದೇ ಪರಸ್ಪರ ಕ್ರಿಸ್ಮಸ್ ಕಾರ್ಡ್‌, ಉಡುಗೊರೆ ನೀಡುವುದು, ಚರ್ಚ್​ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವುದು ಜೊತೆಗೆ ಮನೆಯನ್ನು ಕ್ರಿಸ್​ಮಸ್​ ಟ್ರೀ ಹಾಗೂ ಹೂವುಗಳಿಂದ ಆಲಂಕರಿಸುವುದಾಗಿದೆ. ಸಂಬಂಧಿಕರು, ಸ್ನೇಹಿತರೆಲ್ಲಾ ಒಟ್ಟಾಗಿ ಸೇರಿ ವಿಶೇಷ ಆಹಾರಗಳೊಂದಿಗೆ ಸಂಭ್ರವಿಸುವುದಾಗಿದೆ. ಇಸ್ರೇಲ್‌, ಆಸ್ಟ್ರೇಲಿಯಾ, ಅಮೆರಿಕ, ಬ್ರಿಟನ್‌, ಜಪಾನ್‌, ಚೈನಾ, ಈಜಿಪ್ಟ್‌, ರಷ್ಯಾ, ರೊಮೊನಿಯಾ, ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವು ಭಾಗಗಳಲ್ಲಿ ಪ್ರತಿವರ್ಷ ಕ್ರಿಸ್‌ಮಸ್‌ ಆಚರಿಸುತ್ತಾರೆ.

ಕ್ರಿಶ್ಚಿಯನ್ ಸಮುದಾಯದ ಪ್ರಕಾರ ಇಡೀ ವಿಶ್ವಕ್ಕೆ ಶಾಂತಿಯ ಸಂದೇಶವನ್ನು ಸಾರಿದ ಯೇಸು ಕ್ರಿಸ್ತ ಜನಿಸಿದ ದಿನವನ್ನು ಪ್ರತಿವರ್ಷ ಕ್ರಿಸ್‌ಮಸ್‌ ಹಬ್ಬವಾಗಿ ಆಚರಿಸಲಾಗುತ್ತದೆ.ಜೋಸೆಫ್‌ ಮತ್ತು ಮೇರಿಯ ಪುತ್ರನಾಗಿ ಡಿಸೆಂಬರ್ 25ರಂದು ಯೇಸು ಜನಿಸುತ್ತಾರೆ. ಗ್ರೀಕ್‌ ಲಿಪಿಯಲ್ಲಿ ಯೇಸು ಕ್ರಿಸ್ತನ ಮೊದಲ ಅಕ್ಷರವು ಇಂಗ್ಲೀಷಿನಲ್ಲಿ X ನಂತೆ ಕಾಣುವುದರಿಂದ ಈ ಹಬ್ಬವನ್ನು ಕ್ರಿಸ್‌ಮಸ್‌ ಎಂದೂ ಇನ್ನೂ ಕೆಲವರು ಎಕ್ಸ್‌ ಮಸ್‌ ಎಂದೂ ಕರೆಯುತ್ತಾರೆ. ಡಿಸೆಂಬರ್‌ 25ರಂದು ಸಾರ್ವತ್ರಿಕ ರಜಾ ದಿನವಾಗಿ ಘೋಷಿಸಲಾಗಿದೆ.

ಸಾಂತಾ ಕ್ಲಾಸ್ ಉಡುಗೊರೆಯನ್ನು ಹೊತ್ತು ತರುತ್ತಾನೆ ಎಂಬ ನಂಬಿಕೆಯನ್ನು ಹಾಗೆಯೇ ಉಳಿಸಲು ಪ್ರತಿ ವರ್ಷ ಸೀಕ್ರೇಟ್ ಸಾಂತ ಎಂದು ಕೂಡ ಆಚರಿಸಲಾಗುತ್ತದೆ. ಈ ಸಾಂತಾ ಕ್ಲಾಸ್ ಹಿಂದೆ ಇತಿಹಾಸವೇ ಇದೆ. ಸೇಂಟ್ ನಿಕೋಲಸ್ ಎಂಬ ಸನ್ಯಾಸಿ ಇಂತಹ ಆಚರಣೆಯನ್ನು ತಂದರು ಎಂದು ಹೇಳಲಾಗುತ್ತದೆ. ಸೇಂಟ್ ನಿಕೋಲಸ್ ಕ್ರಿ.ಶ. 280ರ ಸುಮಾರಿಗೆ ಜನಿಸಿದನೆಂದು ಪುರಾಣಗಳಲ್ಲಿ ಉಲ್ಲೇಖವಿದೆ.