ಕ್ರೈಸ್ಟ್ ಕಿಂಗ್, ಕಾರ್ಕಳ: ಹತ್ತನೇ ತರಗತಿ ಫಲಿತಾಂಶ- ಸತತ 17ನೇ ಬಾರಿಗೆ ಶೇ.ನೂರು ಫಲಿತಾಂಶ

ಕಾರ್ಕಳ: ಈ ಬಾರಿಯ ಹತ್ತನೇ ತರಗತಿ ಫಲಿತಾಂಶದಲ್ಲಿ ಇಲ್ಲಿನ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆ ಮತ್ತೊಮ್ಮೆ 100% ಫಲಿತಾಂಶದೊಂದಿಗೆ ಸತತ 17ನೇ ಬಾರಿಗೆ ನೂರು ಶೇಕಡಾ ಫಲಿತಾಂಶ ದಾಖಲಿಸಿದೆ.

ಒಟ್ಟು 159 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ 95 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 62 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ ಎರಡು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 

ಪರೀಕ್ಷೆ ಬರೆದ ಸಂಸ್ಥೆಯ 98.74 % ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದಂತಾಗಿದೆ. ಒಟ್ಟು 58 ವಿದ್ಯಾರ್ಥಿಗಳು ಎ+ ಅಂದರೆ 90 ಶೇಕಡಾಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ.

600ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು

ಕೆ.ಶ್ರೀಶಾ ಪ್ರಭು 617, ಅನುಶ್ರೀ ಪ್ರಭು 611, ಆಯಿಷಾ ರೂಬಾ 608, ಧನ್ವಿ ಗಣೇಶ್ ಶೆಟ್ಟಿ 608, ಟಿಸ್ಸಾ ಅಲ್ಫೋನ್ಸಾ ಆಗಸ್ಟೀನ್ 607, ಆದ್ಯಾ ಸುಧೀರ್ ಜೈನ್ 605, ಗೌತಮಿ ಪ್ರಭಾಕರ್ ಶೆಟ್ಟಿ 605. ಲೆನಿಶಾ ಡಿಸೋಜ 604, ನೋರ್ವಿನ್ ಮೆಂಡೋನ್ಸಾ 604, ಸಾನ್ವಿ ಸತೀಶ್ ಶೆಟ್ಟಿ 604, ಸ್ಲಾನಿಯಾ ನಿಸೆಲ್ ನೊರೋನ್ಹಾ 604, ಆರುಷ್ ಎಸ್ ಶೆಟ್ಟಿ 603, ಫಾತಿಮಾ ಶಿಫಾನಾ 603, ಕವನ ಕೆ ಮೂಲ್ಯ 603, ಸಾನ್ವಿ ಮಾರ್ಟಿಸ್ 602, ಅನಿಷಾ ಡಿಸೋಜ 601, ಲೆನಿಶಾ ಲಿಯಾನ್ನಾ ಮೆಂಡೋನ್ಸಾ 601 ಹಾಗೂ ಶಹನುಮ್ ಫಾತಿಮಾ 601 ಅಂಕಗಳನ್ನು ಪಡೆದಿದ್ದಾರೆ.

ಕನ್ನಡದಲ್ಲಿ 25, ಹಿಂದಿಯಲ್ಲಿ 21, ಗಣಿತದಲ್ಲಿ 1 ಹಾಗೂ ಸಮಾಜ ವಿಜ್ಞಾನದಲ್ಲಿ 7 ಹೀಗೆ ಒಟ್ಟು 54 ವಿಷಯವಾರು ನೂರಕ್ಕೆ ನೂರು ಅಂಕಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.