ಕಾರ್ಕಳದ ಕ್ರೈಸ್ಟ್ ಕಿಂಗ್ ಕಾಲೇಜು: ದ್ವಿತೀಯ ಪಿಯುಸಿಯಲ್ಲಿ, ಶೇ. ನೂರು ಫಲಿತಾಂಶ; 12 ವಿದ್ಯಾರ್ಥಿಗಳು ರಾಜ್ಯದ ಟಾಪ್ 10ನಲ್ಲಿ

ಕಾರ್ಕಳ: ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಫಲಿತಾಂಶದಲ್ಲಿ ಮತ್ತೆ ದಾಖಲೆ ಸೃಷ್ಠಿಸಿದೆ. ನೂರು ಶೇಕಡಾ ಫಲಿತಾಂಶ ಪಡೆದುಕೊಂಡ ಈ ಸಂಸ್ಥೆಯಿಂದ 12 ವಿದ್ಯಾರ್ಥಿಗಳು ರಾಜ್ಯದ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದ ಪ್ರಮುಖ ಸಾಧನೆಗಳು

  • ಪ್ರಜ್ವಲ್ ಶೆಟ್ಟಿ ಮತ್ತು ಶ್ರೀಮಾ ದೇವಾಡಿಗ 596 ಅಂಕಗಳೊಂದಿಗೆ ರಾಜ್ಯದಲ್ಲಿ 4ನೇ ಸ್ಥಾನ ಪಡೆದಿದ್ದಾರೆ.
  • ಮದಿಹಾ ಫಾತಿಮಾ (594), ಜಿತೇಶ್ ಪಿಂಟೊ (593), ಮಹಿಪಾಲ್ ಸಿಂಗ್ (589), ಮನೋಜ್ ಪೈ (589) ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ
  • ವಾಣಿಜ್ಯ ವಿಭಾಗದಲ್ಲಿ ಒಟ್ಟು 123 ವಿದ್ಯಾರ್ಥಿಗಳು ಪರೀಕ್ಷೆ ಬರೆದು, 94 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ 29 ವಿದ್ಯಾರ್ಥಿಗಳು ಪ್ರಥಮ ದರ್ಜೆ ಪಡೆದಿದ್ದಾರೆ.

ವಿಜ್ಞಾನ ವಿಭಾಗದ ಪ್ರಮುಖ ಸಾಧನೆಗಳು

  • ಸ್ಮೃತಿ ಮರಾಠೆ 592 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
  • ಸಿಯಾ ವೆನಿಶಾ ಡಿ’ಸೋಜ (591), ವಿಜೇತ್ ಆರ್ ಶೆಟ್ಟಿಗಾರ್ (591), ಮೊಹಮ್ಮದ್ ಮಾಶಿದ್ (590), ರೋಶನ್ ಥೋರಸ್ (590), ಅಪೇಕ್ಷಾ ಜೈನ್ (589) ಸಾಧನೆ ಮಾಡಿದ್ದಾರೆ
  • ವಿಜ್ಞಾನ ವಿಭಾಗದಲ್ಲಿ ಒಟ್ಟು 156 ವಿದ್ಯಾರ್ಥಿಗಳು ಪರೀಕ್ಷೆ ಬರೆದು, 112 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ 44 ವಿದ್ಯಾರ್ಥಿಗಳು ಪ್ರಥಮ ದರ್ಜೆ ಪಡೆದಿದ್ದಾರೆ.

ಒಟ್ಟು ಸಾಧನೆ

  • 149 ವಿದ್ಯಾರ್ಥಿಗಳು ಶೇಕಡಾ 90ಕ್ಕಿಂತ ಹೆಚ್ಚು ಅಂಕಗಳು ಪಡೆದುಕೊಂಡಿದ್ದಾರೆ.
  • ಉತ್ತೀರ್ಣವಾದ ಎಲ್ಲ ವಿದ್ಯಾರ್ಥಿಗಳೂ ಪ್ರಥಮ ದರ್ಜೆ ಅಥವಾ ಮೇಲುಗೈ ಸಾಧಿಸಿದ್ದಾರೆ.