ಖ್ಯಾತ ನೃತ್ಯ ನಿರ್ದೇಶಕ ರೆಮೋ ಡಿಸೋಜಾಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ನವದೆಹಲಿ: ಬಾಲಿವುಡ್ ನ ಖ್ಯಾತ ನೃತ್ಯ ನಿರ್ದೇಶಕ ಹಾಗೂ ನಿರ್ದೇಶಕ ರೆಮೋ ಡಿಸೋಜಾ (46) ಅವರಿಗೆ ಇಂದು ಮಧ್ಯಾಹ್ನ ಹೃದಯಾಘಾತವಾಗಿದ್ದು, ಅವರು ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಸದ್ಯ ರೆಮೋ ಡಿಸೋಜಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಆಂಜಿಯೋಗ್ರಫಿ ಮಾಡಿದ್ದಾರೆ. ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ರಿಮೋ ಬಾಲಿವುಡ್ ನ ಕಿಕ್, ಝೀರೋ, ಬಾಜಿರಾವ್ ಮಸ್ತಾನಿ, ಭಜರಂಗಿ ಭಾಯಿಜಾನ್, ಯೇ ಜವಾನಿ ಹೈ ದಿವಾನಿ ಮುಂತಾದ ಚಿತ್ರಗಳಲ್ಲಿ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಡ್ಯಾನ್ಸ್ ಇಂಡಿಯಾ ಡಾನ್ಸ್, ಡ್ಯಾನ್ಸ್ ಪ್ಲಸ್ ಮತ್ತು ಝಲಕ್ ದಿಖ್ಲಾ ಜಾ ಮುಂತಾದ ಡ್ಯಾನ್ಸ್ ರಿಯಾಲಿಟಿ ಶೋಗಳ ತೀರ್ಪುಗಾರರಾಗಿದ್ದರು. ಅಲ್ಲದೆ,  ಪ್ರಭುದೇವ ನಟನೆಯ ಎಬಿಸಿಡಿ ಹಿಂದಿ ಚಿತ್ರವನ್ನು ನಿರ್ದೇಶನ ಮಾಡಿದ್ದರು.