ನವದೆಹಲಿ: ಚೀನಾ ಮತ್ತು ಭಾರತ ದೇಶಗಳ ಮಧ್ಯೆ ಗಡಿ ತಕರಾರು ನಡೆಯುತ್ತಿರುವ ಸಂದರ್ಭದಲ್ಲೇ ಚೀನಾ ಮೂಲದ 59 ಮೊಬೈಲ್ ಅಪ್ಲಿಕೇಷನ್ ಗಳನ್ನು ಕೇಂದ್ರ ಸರಕಾರ ನಿಷೇಧಿಸಿ ಇಂದು ಆದೇಶ ಹೊರಡಿಸಿದೆ.
ಆ ಮೂಲಕ ಚೀನಾಕ್ಕೆ ದೊಡ್ಡ ಶಾಕ್ ನೀಡಿದೆ. ಭಾರತದ ಮೊಬೈಲ್ ಬಳಕೆದಾರರ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ ಮತ್ತು ಖಾಸಗಿತನಕ್ಕೆ ಅಪಾಯ ಉಂಟುಮಾಡುತ್ತಿದೆ ಎನ್ನುವ ಕಾರಣದಿಂದ ಆ ಎಲ್ಲ ಆ್ಯಪ್ ಗಳನ್ನು ಬ್ಯಾನ್ ಮಾಡಲಾಗಿದೆ. ಟಿಕ್ ಟಾಕ್, ಹಲೋ ಆ್ಯಪ್ ಸೇರಿದಂತೆ ಚೀನಾ ಮೂಲದ ಅನೇಕ ಆ್ಯಪ್ ಗಳು ಭಾರತದಲ್ಲಿ ಭಾರೀ ಹಿಡಿತ ಸಾಧಿಸಿತ್ತು.
ನಿಷೇಧವಾಗಿರುವ ಆ್ಯಪ್ಗಳ ಪಟ್ಟಿ ಇಲ್ಲಿದೆ:
ಟಿಕ್ ಟಾಕ್, ಶೇರ್ ಇಟ್, ಕ್ವಾಯ್ (Kwai), ಯುಸಿ ಬ್ರೌಸರ್, ಬೈಡು, ಶೇನ್, ಕ್ಲಾಶ್ ಆಫ್ ಕಿಂಗ್ಸ್, ಡಿಯು ಬ್ಯಾಟರಿ ಸೇವರ್, ಹೆಲೊ, ಲೈಕೀ, ಯುಕ್ಯಾಮ್ ಮೇಕ್ಅಪ್, ಎಂಐ ಕಮ್ಯೂನಿಟಿ, ಸಿಎಂ ಬ್ರೊವರ್ಸ್, ವೈರಸ್ ಕ್ಲೀನರ್, ಎಪಿಯುಎಸ್ ಬ್ರೌಸರ್, ರೋಮ್ವಿ, ಕ್ಲಬ್ ಫ್ಯಾಕ್ಟರಿ, ನ್ಯೂಸ್ ಡಾಗ್, ಬ್ಯೂಟಿ ಪ್ಲಸ್, ವಿ ಚಾಟ್, ಯುಸಿ ನ್ಯೂಸ್, ಕ್ಯುಕ್ಯು ಮೇಲ್, ಕ್ಯುಕ್ಯು ಮ್ಯೂಸಿಕ್, ಕ್ಯುಕ್ಯು ನ್ಯೂಸ್ಫೀಡ್, ಬಿಗೊ ಲೈವ್, ಸೆಲ್ಫಿ ಸಿಟಿ, ಮೇಲ್ ಮಾಸ್ಟರ್, ಪ್ಯಾರಲಲ್ ಸ್ಪೇಸ್, ವಿಗೊ ವಿಡಿಯೊ, ನ್ಯೂ ವಿಡಿಯೊ ಸ್ಟೇಟಸ್, ಡಿಯು ರೆಕಾರ್ಡರ್, ವಾಲ್ಟ್ – ಹೈಡ್, ಕ್ಯಾಷ್ (Cache) ಕ್ಲೀನರ್ ಡಿಯು ಆಪ್ ಸ್ಟುಡಿಯೊ, ಡಿಯು ಕ್ಲೀನರ್, ಡಿಯು ಬ್ರೌಸರ್, ಹಗೊ ಪ್ಲೇ ವಿತ್ ನ್ಯೂ ಫ್ರೆಂಡ್ಸ್, ಕಾಮ್ ಸ್ಕಾನರ್, ಕ್ಲೀನ್ ಮಾಸ್ಟರ್ – ಚೀತಾ ಮೊಬೈಲ್, ವಂಡರ್ ಕ್ಯಾಮೆರಾ, ಫೋಟೊ ವಂಡರ್, ಕ್ಯುಕ್ಯು ಪ್ಲೇಯರ್, ವಿ ಮೀಟ್, ಸ್ವೀಟ್ ಸೆಲ್ಫಿ, ಬೈಡು ಟ್ರಾನ್ಸ್ಲೇಟ್, ವಿಮೇಟ್, ಕ್ಯುಕ್ಯು ಇಂಟರ್ನ್ಯಾಷನಲ್, ಕ್ಯುಕ್ಯು ಸೆಕ್ಯುರಿಟಿ ಸೆಂಟರ್, ಕ್ಯುಕ್ಯು ಲಾಂಚರ್, ಯು ವಿಡಿಯೊ, ವಿ ಫ್ಲೈ ಸ್ಟೇಟಸ್ ವಿಡಿಯೊ, ಮೊಬೈಲ್ ಲೆಜೆಂಡ್ಸ್, ಡಿಯು ಪ್ರೈವಸಿ.