ಕೋಳಿ ಮಾಂಸಕ್ಕೆ ನಮ್ಮಲ್ಲಿ ವರ್ಷಪೂರ್ತಿ ಬೇಡಿಕೆ ಇದ್ದೇ ಇರುತ್ತದೆ. ದಿನಾಲೂ ಚಿಕನ್ ತಿನ್ನುವ ನಾನ್ ವೆಜ್ ಪ್ರಿಯರಿಗೇನೂ ಕಡಿಮೆ ಇಲ್ಲ. ಕೋಳಿ ಮಾಂಸದಲ್ಲಿ ಪ್ರೋಟೀನ್ ಜಾಸ್ತಿ ಇದೆ ಎನ್ನುವ ಕಾರಣಕ್ಕೆ ತಿನ್ನುವವರೂ ಇದ್ದಾರೆ. ಆದರೆ ಅತೀಯಾಗಿ ಚಿಕನ್ ತಿನ್ನುವುದರಿಂದ ಹೃದಯಾಘಾತವಾಗುತ್ತದೆ ಎನ್ನುವ ವದಂತಿಯೊಂದು ಈಗ ಹರಿದಾಡುತ್ತಿದೆ. ಆದರೆ ಇದಕ್ಕೆ ಪುರಾವೆ ಏನೂ ಸಿಕ್ಕಿಲ್ಲವಾದರೂ ಅತೀಯಾದ ಚಿಕನ್ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ಬಹುತೇಕ ವೈದ್ಯರ ಅಭಿಮತ. ಆದರೆ ಫಾರಂ ಗಳಲ್ಲಿ ಕಡಿಮೆ ಸಮಯದಲ್ಲಿ ಕೋಳಿಯ ತೂಕ ಹೆಚ್ಚಿಸಲು ಹಾರ್ಮೋನುಗಳನ್ನು ಮತ್ತು ಪ್ರತಿಜೀವಕಗಳನ್ನು ನೀಡಲಾಗುತ್ತದೆ ಎನ್ನುವುದು ಬೆಳಕಿಗೆ ಬಂದಿದೆ. ಈ ಹಾರ್ಮೋನುಗಳು ಹೃದಯ ಕಾಯಿಲೆಗೆ ಕಾರಣವಾಗುತ್ತವೆ ಎಂದು ಹೇಳಲಾಗುತ್ತಿದೆ.
ಕಾಲಿನ ತುಂಡು ಇಷ್ಟನಾ?
ನೀವು ಕೋಳಿಯ ಕಾಲುತುಂಡುಗಳನ್ನು ಭಾರೀ ಇಷ್ಟ ಪಟ್ಟು ತಿನ್ನಬಹುದು. ಹಲವರು ಕಾಲಿನ ತುಂಡುಗಳನ್ನು ಇಷ್ಟಪಡುತ್ತಾರೆ. ಆದರೆ ಕೆಲವು ರೈತರು ಹೊಲಗಳಲ್ಲಿ ಕೋಳಿ ತೊಡೆಗಳಿಗೆ ಸ್ಟೀರಾಯ್ಡ್‌ಗಳನ್ನು ಚುಚ್ಚುತ್ತಾರೆ ಎಂಬ ವಿಷಯ ಗುಟ್ಟಾಗಿ ಏನೂ ಉಳಿದಿಲ್ಲ. ಹಾಗಾಗಿ ಕಾಲಿನ ಭಾಗವನ್ನು ಜಾಸ್ತಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಮತ್ತು ಕೋಳಿ ಚರ್ಮವನ್ನು ತಿನ್ನುವುದನ್ನು ಸಹ ತಪ್ಪಿಸಬೇಕು, ಏಕೆಂದರೆ ಇದರಲ್ಲಿ ಕೊಬ್ಬು ಅಧಿಕವಾಗಿರುತ್ತದೆ, ಇದು ಹೃದಯಕ್ಕೆ ಹಾನಿಕಾರಕವಾಗಿದೆ ಎನ್ನುವುದು ಕೆಲವೊಂದು ಅಧ್ಯಯನಗಳಿಂದ ಸಾಬೀತಾಗಿದೆ.

ದಿನ ದಿನವೂ ಕೋಳಿ ಮಾಂಸ ತಿನ್ನುವುದರಿಂದ ಕೊಲೆಸ್ಟ್ರಾಲ್ ಜಾಸ್ತಿಯಾಗುತ್ತದೆ. ಮೂತ್ರಪಿಂಡಗಳ ಮೇಲೆ ಒತ್ತಡ ಬೀಳುತ್ತದೆ, ದೇಹದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಕೋಳಿ ಮಾಂಸದಲ್ಲಿ ಹಾರ್ಮೋನುಗಳು ಅಥವಾ ಪ್ರತಿಜೀವಕಗಳಿದ್ದರೆ ಇದು ಜಾಸ್ತಿ ಅಪಾಯಕಾರಿ.
ಹೀಗೆ ಮಾಡಿ:
ಮನೆಯಲ್ಲಿ ಬೇಯಿಸಿದ, ಸ್ಥಳೀಯ ಕೋಳಿಯನ್ನು (ನಾಟಿ ಕೋಳಿ) ತಿನ್ನುವುದು ಒಳ್ಳೆಯ ದಾರಿ.ಫಾರಂ ನಲ್ಲಿ ಸಿಗುವ ಬಾಯ್ಲರ್ ಕೋಳಿ ಸೇವನೆ ಕಡಿಮೆ ಮಾಡಿ. ಮಾಂಸವನ್ನು ಜಾಸ್ತಿ ಬೇಯಿಸಿ ತಿನ್ನುವುದು ಒಳ್ಳೇದು, ನಾಟಿಕೋಳಿ ಮೊಟ್ಟೆ ಕೂಡ ಆರೋಗ್ಯಕ್ಕೆ ಸಹಕಾರಿಯಾಗಿದೆ.ದಿನ ದಿನವೂ ಕೋಳಿ ತಿನ್ನುವ ಬದಲು ನಿಯಮಿತವಾಗಿ ತಿನ್ನುವುದು ಒಳ್ಳೆದು.












