ಡಿ.11 ರಂದು ವಿಕಲಚೇತನರಿಗಾಗಿ ಚೆಸ್ ಪಂದ್ಯಾಟ

ಕೋಟ: ವಿಕಲಚೇತನರ ಮತ್ತು ಹಿರಿಯ ನಾಗರೀಕರ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲೆ ಹಾಗೂ ಉಡುಪಿ ಜಿಲ್ಲಾ ವಿಕಲಚೇತನರ ಕ್ರೀಡಾ ಸಂಘ, ಇವರ ಸಹಯೋಗದಲ್ಲಿ ವಿಕಲಚೇತನರ ದಿನಾಚರಣೆಯ ಪ್ರಯುಕ್ತ ವಿಕಲಚೇತನರಿಗಾಗಿ ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಚದುರಂಗ ಸ್ಪರ್ಧೆಯನ್ನು ಡಿ.11 ಭಾನುವಾರದಂದು ಬೆಳಿಗ್ಗೆ 9.30 ರಿಂದ ವಿಕಲಚೇತನ ಮಾಹಿತಿ ಕೇಂದ್ರದಲ್ಲಿ ಏರ್ಪಡಿಸಲಾಗಿದೆ. ಆಸಕ್ತ ವಿಕಲಚೇತನರು ಈ ಚೆಸ್ ಪಂದ್ಯಾಟದಲ್ಲಿ ಭಾಗವಹಿಸಲು ಕೋರಲಾಗಿದೆ.

ಷರತ್ತುಗಳು:

  • ಆಸಕ್ತ ವಿಕಲಚೇತನರು ಡಿ. 09 ರ ಸಂಜೆ 5:00 ಗಂಟೆಯ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು.
  • ಹೆಸರನ್ನು ನೊಂದಾಯಿಸಿಕೊಂಡ ಸದಸ್ಯರು ನಿಗದಿಪಡಿಸಿದ ದಿನಾಂಕದಂದು ಕ್ಲಪ್ತ ಸಮಯಕ್ಕೆ ಹಾಜರಿರತಕ್ಕದ್ದು.
  • ಡಿ.9 ರ ಸಂಜೆ 5:00 ಗಂಟೆಯ ನಂತರದ ಹೆಸರನ್ನು ಪರಿಗಣಿಸಲಾಗುವುದಿಲ್ಲ, ಪ್ರತೀ ಆಟಕ್ಕೆ ನಿಗದಿತ ಕಾಲಾವಕಾಶವಿದೆ.
  • ತೀರ್ಪುಗಾರರ ನಿರ್ಣಯವೆ ಅಂತಿಮ.
  • ಉಡುಪಿ ಜಿಲ್ಲೆಯವರಿಗೆ ಮಾತ್ರ ಅವಕಾಶ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9886890498 7676987383