ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ಆಲ್ರೌಂಡರ್ ಸುರೇಶ್ ರೈನಾ ಅವರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹೊರನಡೆದಿದ್ದಾರೆ.
ಸುರೇಶ್ ರೈನಾ ವೈಯಕ್ತಿಕ ಕಾರಣಗಳಿಗಳಿಂದಾಗಿ ಭಾರತಕ್ಕೆ ಮರಳಿದ್ದಾರೆ. ಉಳಿದ ಐಪಿಎಲ್ ಋತುವಿನಲ್ಲಿ ಅವರು ಲಭ್ಯವಿರುವುದಿಲ್ಲ. ಈ ಸಮಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸುರೇಶ್ ಮತ್ತು ಅವರ ಕುಟುಂಬದ ಸಂಪೂರ್ಣ ಬೆಂಬಲಕ್ಕೆ ನಿಲ್ಲುತ್ತದೆ,’ ಎಂದು ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ಟ್ವೀಟ್ ಮಾಡಿದ್ದಾರೆ.
33 ವರ್ಷದ ಆಟಗಾರ ರೈನಾ ಈ ತಿಂಗಳ ಆರಂಭದಲ್ಲಿ ದೋನಿ ಜತೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು.