ಉಡುಪಿ: ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ 11ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ದಿನೇಶ ಸಿ ನಾಯ್ಕ್ ಇವರ ಅಧ್ಯಕ್ಷತೆಯಲ್ಲಿ ಬನ್ನಂಜೆ ಶ್ರೀ ನಾರಾಯಣಗುರು ಮಂದಿರದ ಶಿವಗಿರಿ ಸಭಾಗೃಹದಲ್ಲಿ ಜರುಗಿತು.
ಸಂಘವು 11 ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದ್ದು 3,708 ಸದಸ್ಯರನ್ನು ಹೊಂದಿದ್ದು ಸದಸ್ಯರಿಗೆ ವಿವಿಧ ರೀತಿಯ ಸಾಲಗಳನ್ನು ನೀಡಿ ಶೇ.97.00 ಸಾಲ ವಸೂಲಾತಿ ನಡೆಸಿದೆ ಸಂಘವು ಪ್ರಸಕ್ತ ಸಾಲಿನಲ್ಲಿ ಒಟ್ಟು 45 ಕೋಟಿ ವ್ಯವಹಾರ ನಡೆದಿದ್ದು ಸಂಘವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಮುಂದಿನ ವರ್ಷಗಳಲ್ಲಿ ಐದು ಸಾವಿರ ಸದಸ್ಯರನ್ನು ಹೊಂದಿ 50 ಲಕ್ಷ ಶೇರು ಬಂಡವಾಳ ಹೊಂದಿ ಕಡಿಮೆ ಬಡ್ಡಿ ದರದಲ್ಲಿ ಹಾಗೂ ತ್ವರಿತ ವಾಗಿ ಗುಂಪು ಸಾಲ,ಚಿನ್ನಾಭರಣ ಸಾಲ,ವಾಹನ ಸಾಲ ನೀಡಲಿದ್ದೇವೆ. ಸಂಘವು ಮುಂದಿನ ದಿನಗಳಲ್ಲಿ ಸಂಘವು ಇನ್ನಷ್ಟು ಪ್ರಗತಿ ಹೊಂದಬೇಕು,ಇದಕ್ಕೆ ಸದಸ್ಯರಲ್ಲರೂ ತಮ್ಮನ್ನು ಸಂಪೂರ್ಣವಾಗಿ ಸಂಘದಲ್ಲಿ ವ್ಯವಹಾರವನ್ನು ಮಾಡಬೇಕು, ಪ್ರಸ್ತುತ ವರ್ಷದಲ್ಲಿ ಲಾಭದಲ್ಲಿ 9% ಪಾಲು ಮುನಾಫೆ ನೀಡುವುದೆಂದು ಮತ್ತು ಗ್ರಾಮೀಣ ಪ್ರದೇಶದಲ್ಲಿ ಶಾಖೆಯನ್ನು ತೆರೆಯುವ ಯೋಜನೆ ಇದೆ ಅಧ್ಯಕ್ಷರು ತಿಳಿಸಿದರು.
ಎಸ್ ಎಸ್ ಎಲ್ ಸಿ ಮತ್ತು ಪಿ.ಯು.ಸಿ ಯಲ್ಲಿ ವಿಶಿಷ್ಟ ದರ್ಜೆಯಲ್ಲಿ ತೆರ್ಗಡೆ ಹೊಂದಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೊತ್ಸಹ ಧನ ವಿತರಿಸಿ ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷರಾದ ಗಣೇಶ, ನಿರ್ದೆಶಕರಾದ ಲಕ್ಷ್ಮಣ ನಾಯ್ಕ್, ಆರ್.ಸಿ.ನಾಯ್ಕ್, ಸತೀಶ ನಾಯ್ಕ್, ಚಂದ್ರ ಎಚ್ ನಾಯ್ಕ್, ಕೃಷ್ಣ ನಾಯ್ಕ್, ಕರುಣಾಕರ ಕಾಂಚನ್,ರಘುನಾಥ ನಾಯ್ಕ್ಹರೀಶ ನಾಯ್ಕ್,ಶೇಖರ ಶೆಟ್ಟಿ, ಶ್ರೀಮತಿ ಜ್ಯೋತಿ ಶೆಟ್ಟಿ ಶ್ರೀಮತಿ ಶೋಭಾ ಕುಮಾರಿ ಅಶ್ವಿನಿ ಪ್ರಾರ್ಥನೆ ಮಾಡಿ, ಸಂಘದ ಸಿಬ್ಬಂದಿ ಕಿರಣ ಕುಮಾರ ಸ್ವಾಗತಿಸಿ, ಸಿ.ಇ.ಓ ಪ್ರಶಾಂತ್ ಶಿರೂರು ವಾರ್ಷಿಕ ವರದಿ ವಾಚಿಸಿ ವಂದಿಸಿದರು.


















