udupixpress
Home Trending ಚಾರ್ಮಾಡಿ: ದಿನದ 24 ಗಂಟೆಗಳ ಕಾಲ ಲಘು ವಾಹನ ಸಂಚಾರಕ್ಕೆ ಅವಕಾಶ

ಚಾರ್ಮಾಡಿ: ದಿನದ 24 ಗಂಟೆಗಳ ಕಾಲ ಲಘು ವಾಹನ ಸಂಚಾರಕ್ಕೆ ಅವಕಾಶ

ಚಿಕ್ಕಮಗಳೂರು: ಮಳೆ ಕಾರಣದಿಂದ ಚಾರ್ಮಾಡಿ ಘಾಟಿ ಮಾರ್ಗದಲ್ಲಿ ರಾತ್ರಿ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧವನ್ನು  ತೆರವುಗೊಳಿಸಲಾಗಿದ್ದು, ಇಂದಿನಿಂದ ದಿನದ 24 ಗಂಟೆಯೂ ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮಳೆ ಕ್ಷೀಣಿಸಿದ್ದು, ಮಂಜು ಮುಸುಕು ವಾತಾವರಣವೂ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್‌ ನಿರ್ಬಂಧ ತೆರವುಗೊಳಿಸಿ ಆದೇಶ ಹೊರಡಿಸಿದ್ದಾರೆ.