ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ-3 ಚಂದ್ರನ ಮಿಷನ್ ಸಾಫ್ಟ್ ಲ್ಯಾಂಡ್‌ಗೆ ಮಾಡಿದೆ. ವಿಕ್ರಮ್ ಲ್ಯಾಂಡರ್ ಸಂಜೆ 6.04 ಕ್ಕೆ ಮೃದುವಾದ ಚಂದ್ರನ ಲ್ಯಾಂಡಿಂಗ್ ಮಾಡಿದೆ. ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಪ್ರಧಾನಿ ಮೋದಿ ವರ್ಚುವಲ್ ಮೂಲಕ ಚಂದ್ರಯಾನವನ್ನು ವೀಕ್ಷಿಸಿ, ಈ ಸಾಧನೆಗಾಗಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.
https://twitter.com/i/broadcasts/1vOGwMXPAwDxB
ಇಡೀ ದೇಶವೇ ಈ ಸಾಧನೆಗಾಗಿ ಆನಂದಬಾಷ್ಫಗಳನ್ನು ಸುರಿಸಿ ವಿಜ್ಞಾನಿಗಳನ್ನು ಅಭಿನಂದಿಸುತ್ತಿದೆ.
ಚಂದ್ರಯಾನ 3ರ ನೇರ ಪ್ರಸಾರವನ್ನು 3.4 ಮಿಲಿಯನ್ ವೀಕ್ಷಕರು ವೀಕ್ಷಿಸಿ ಸ್ಪ್ಯಾನಿಷ್ ಸ್ಟ್ರೀಮರ್ ಇಬೈ ನ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
ಇಸ್ರೋದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ 3.6 ಮಿಲಿಯನ್‌ಗಿಂತಲೂ ಹೆಚ್ಚು ಜನರು ಚಂದ್ರಯಾನ3 ವಿಕ್ರಮ್ ಲ್ಯಾಂಡಿಂಗ್ ಅನ್ನು ವೀಕ್ಷಿಸಿದ್ದಾರೆ.