ಹೆಬ್ರಿ: ಏ.10 ರಿಂದ ಚಾಣಕ್ಯ ನಲಿಕಲಿ-ಬೇಸಿಗೆ ರಜಾ ಶಿಬಿರ

ಹೆಬ್ರಿ : ವಿನೂತನ ತರಬೇತಿ ಹಾಗೂ ವೈವಿಧ್ಯಮಯ ಮನರಂಜನೆ ಮೂಲಕ ಉಡುಪಿ ಜಿಲ್ಲೆ ಮಾತ್ರವಲ್ಲದೆ ದೂರದ ವಿದ್ಯಾರ್ಥಿಗಳ ಮನಗೆದ್ದಿರುವ ವೈವಿಧ್ಯಮಯ ಬೇಸಿಗೆ ಶಿಬಿರ ಇದೀಗ ಮತ್ತೆ ಬಂದಿದೆ.
ಹೆಬ್ರಿಯ ಚಾಣಕ್ಯ ಏಜ್ಯಕೇಶನ್ ಮತ್ತು ಕಲ್ಚರಲ್ ಆಕಾಡೆಮಿ ನೇತೃತ್ವದಲ್ಲಿ ಜೇಸಿಐ ಹೆಬ್ರಿ ಇವರ ಸಹಯೋಗದೊಂದಿಗೆ ಹೆಬ್ರಿ ಎಸ್.ಆರ್.ಸ್ಕೂಲ್ ಬಳಿಯ ಗುರುಕೃಪಾ ಬಿಲ್ಡಿಂಗ್‌ನಲ್ಲಿರುವ ಚಾಣಕ್ಯ ಟ್ಯೂಟೋರಿಯಲ್ ಕಾಲೇಜಿನಲ್ಲಿ ಏ.10 ರಿಂದ ಏ.27ರವರೆಗೆ 9ನೇ ವರ್ಷದ ಚಾಣಕ್ಯ ನಲಿಕಲಿ ವೈವಿಧ್ಯಮಯ ಬೇಸಿಗೆ ರಜಾ ಶಿಬಿರವನ್ನು ಆಯೋಜಿಸಿದೆ.


ಬೆಳಿಗ್ಗೆ 9.30ರಿಂದ ಸಂಜೆ 4ರತನಕ ನಡೆಯುವ ಈ ಬೇಸಿಗೆ ರಜಾ ಶಿಬಿರದಲ್ಲಿ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ವೈವಿಧ್ಯಮಯ ತರಬೇತಿಗಳ ಜತೆ ಗ್ರಾಮೀಣ ಕಸುಬನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ತರಬೇತಿಗಳು ನಡೆಯಲಿದೆ. ರಜಾ ಸಮಯವನ್ನು ವ್ಯರ್ಥ ಕಾಲಹರಣ ಮಾಡುವ ಬದಲು ಕ್ರೀಯಾಶೀಲತೆಯೊಂದಿಗೆ ಬದುಕು ಶಿಕ್ಷಣ ನೀಡುವ ತರಬೇತಿಯಲ್ಲಿ 5ವರ್ಷ ಮೇಲ್ಪಟ್ಟು 16ವರ್ಷದ ಒಳಗಿನ ಮಕ್ಕಳು ಭಾಗವಹಿಸಲು ಅವಕಾಶವಿದೆ. ಸೀಮಿತ ನೊಂದಾವಣೆಯಿದ್ದು ಆಸಕ್ತರು ಕೂಡಲೇ ತಮ್ಮ ಹೆಸರನ್ನು ಈ ನಂಬರ್ ಗೆ (9900408545) ನೊಂದಾಯಿಸಬಹುದಾಗಿದೆ.

ವೈವಿಧ್ಯಮಯ ಬೇಸಿಗೆ ಶಿಬರ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ. ರಜಾ ಸಮಯವನ್ನು ವ್ಯಥ೯ಕಾಲಹರಣ ಮಾಡುವುದರ ಬದಲು ವಿನೂತನ ತರಬೇತಿ ಹಾಗೂ ಬದುಕು ಶಿಕ್ಷಣ ನೀಡುವ ವೈವಿಧ್ಯಮಯ ತರಬೇತಿಯಲಿ ತಮ್ಮಮಕ್ಕಳನ್ನು ಸೇರಿಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕಲ್ಪಸಲು ಸುವರ್ಣ ಅವಕಾಶವಾಗಿದೆ.

ಶಿಬಿರದಲ್ಲಿ ಏನೇನಿದೆ :

ಹೆಸರಾಂತ ಸಂಪನ್ಮೂಲ ವ್ಯಕ್ತಿ ಗಳಿಂದ ಮಿಮಿಕ್ರಿ,ಜಾದು,ಕರಾಟೆ,ಚಿತ್ರಕಲೆ,ಅಗ್ನಿ ಪ್ರತ್ಯ ಕ್ಷಿತೆ,ಟಿವಿ ರಿಯಾಲಿಟಿ ಸ್ಪರ್ಧೆ,ಕುಣಿತ ಭಜನೆ,ಜಾನಪದ ನತ್ಯ,ಹಾರ್ಮೋನಿಯಂ,ಗ್ಲಾಸ್ ಪೈಂಟಿಂಗ್,ಫಿಲ್ಮ್ ಡ್ಯಾನ್ಸ್,,ಯಕ್ಷಗಾನ ತರಬೇತಿ,ಕಸದಿಂದ ಕಲಾಕೃತಿ,ಮಡಿಕೆ ತಯಾರಿ ಪ್ರಾತ್ಯಕ್ಷಿಕೆ,ಪೇಪರ್ & ಇತರ ಕ್ರಾಫ್ಟ್,ಪಿಕ್ ನಿಕ್,ಟ್ಯಾಟೋ, ಕ್ಲೇ ಆರ್ಟ್,ಶಾಸ್ತ್ರೀಯ ಸಂಗೀತ,ಕರೋಕೆ,ಚೆಸ್,ಭರತನಾಟ್ಯ,ಯೋಗ ಪ್ರ‌ಾಣಾಯಾಮ,ನಾಟಕ /ಚಲನಚಿತ್ರ ಅಭಿನಯ,ಕೃಷಿ ಚಟುವಟಿಕೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ,ಟಂಗ್ ಟ್ವಿಸ್ಟರ್,ವಿವಿಧ ಕ್ರೀಡೆಗಳು,ಕ್ಯಾರಂ & ಜನರಲ್ ನಾಲೆಡ್ಜ್,ವ್ಯಕ್ತಿತ್ವ ವಿಕಸನ ತರಬೇತಿ,ಸಸ್ಯ ಹಾಗೂ ಪಕ್ಷಿ ಸಂಕುಲದ ಬಗ್ಗೆ ಮಾಹಿತಿ,ಆರೋಗ್ಯ ಜಾಗೃತಿ,ಅಕ್ಷರ ಚೆನ್ನಾಗಿ ಬರೆಯಲು/ ನೆನಪು ಶಕ್ತಿ ಹೆಚ್ಚಿಸಲು ವಿವಿಧ ತರಬೇತಿಗಳು, ದಿನನಿತ್ಯ ಮನೋರಂಜನಾ ಕ್ರೀಡೆಗಳು,ವೈವಿಧ್ಯಮಯ ಗ್ರಾಮೀಣ ಕಸೂತಿ ತರಬೇತಿ ( ಸೀರೆ ಗೆ ಗೊಂಡೆ ಕಟ್ಟುವುದು,ಹೂ ಕಟ್ಟುವುದು ,ಹಿಡಿಸೂಡಿ ತಯಾರಿ ,ಮಡಲು ನೇಯುವುದು,ಮೂಡೆ ಕೊಟ್ಟೆ ತಯಾರಿಕೆ) ಇತ್ಯಾದಿ,ಸಾಧಕರೊಂದಿಗೆ ಸಂವಾದ, ಅಲ್ಲದೆ ಇನ್ನಿತರ ಹತ್ತು ಹಲವಾರು ವೈವಿಧ್ಯಮಯ ತರಬೇತಿಗಳು

ವೈಶಿಷ್ಟ್ಯತೆ

ನುರಿತ ತರಬೇತುದಾರರಿಂದ ವೈವಿಧ್ಯಮಯ ತರಬೇತಿ, ಶಿಬಿರದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ಹಾಗೂ ಬಹುಮಾನ, ಶಿಬಿರಾರ್ಥಿಗಳ ಪ್ರತಿಭೆಯನ್ನು ಟಿವಿಯಲ್ಲಿ ನೋಡುವ ಅವಕಾಶ, ಪ್ರತಿ ವಿದ್ಯಾರ್ಥಿಯ ವೈಯಕ್ತಿಕ ಗಮನದೊಂದಿಗೆ ಮನೆಯ ವಾತಾವರಣದೊಂದಿಗೆ ತರಬೇತಿ, ದಿನ ನಿತ್ಯ ವೈವಿಧ್ಯಮಯ ಮನೋರಂಜನಾ ಕ್ರೀಡೆಗಳು, ತರಬೇತಿಯ ಜೊತೆ ವಿವಿಧ ಸ್ಪರ್ಧೆ ನಡೆಸಿ ಸಮಾರೋಪದಲ್ಲಿ ಬಹುಮಾನ ವಿತರಣೆ, ಸಮಾರೋಪದಲ್ಲಿ ಮಕ್ಕಳ ಪ್ರತಿಭಾ ಪ್ರದರ್ಶನ,ವಿಶೇಷ ದಿನಗಳ ಆಚರಣೆ ಸಹಿತ ಮಕ್ಕಳ ಹುಟ್ಟುಹಬ್ಬ ಆಚರಣೆ,ಅಮ್ಮ /ಅಜ್ಜಿಯಂದಿರೊಂದಿಗೆ 1ದಿನ ವಿನೂತನ ಕಾಯ೯ಕ್ರಮ,ವೈವಿಧ್ಯಮಯ ಟಾಸ್ಕ್ ಹಾಗೂ ಪ್ರವಾಸಗಳು,ಹೆಬ್ರಿ ಸಾಲುಮರ ತಿಮ್ಮಕ್ಕ ಟ್ರೀ ಪಾರ್ಕ್ ನಲ್ಲಿ ವೈವಿಧ್ಯಮಯ ತರಬೇತಿಗಳು ಇತ್ಯಾದಿ ನಡೆಯಲಿದೆ.