ಚಾಮರಾಜನಗರ: ಕಡಿಮೆ ರಕ್ತದೊತ್ತಡದಿಂದ 6 ವರ್ಷದ ಪುಟ್ಟ ಪೋರ ಸಾವಿಗೀಡಾದ ಘಟನೆ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ವರದಿಯಾಗಿದೆ.ಬನ್ನಿತಾಳಪುರ ಗ್ರಾಮದ ಮಹೇಶ್ ಮತ್ತು ಸುಮಾ ದಂಪತಿ ಪುತ್ರ ಆರ್ಯ (6) ಮೃತ ಬಾಲಕ ಎಂದು ಗುರುತಿಸಲಾಗಿದೆ. ಒಂದನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಈತನಿಗೆ ಹೃದಯ ಸಮಸ್ಯೆ ಇತ್ತು ಎಂದು ಹೇಳಲಾಗಿದೆ. ಸೋಮವಾರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿತ್ತು.
ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ವಿಷಯ ತಿಳಿದ ಬಾಲಕನ ಹೆತ್ತವರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆಟವಾಡುವ ವಯಸ್ಸಿನಲ್ಲಿ ಲೋ ಬಿಪಿ ಕಾಣಿಸಿಕೊಂಡಿರುವುದು ಹಲವರ ಅಚ್ಚರಿಗೂ ಕಾರಣವಾಗಿದೆ.












