ಸಿಇಟಿ ಸೀಟು ಹಂಚಿಕೆ: ಜಿಲ್ಲೆಯಲ್ಲಿ ದಾಖಲೆ ಪರಿಶೀಲನೆ ಕೇಂದ್ರ ಸ್ಥಾಪನೆ

ಉಡುಪಿ, ಮೇ 31: 2019 ನೇ ಸಾಲಿನ ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಅಭ್ಯರ್ಥಿಗಳ ಇಚ್ಛೆಯ ಅನುಸಾರ,  ಆನ್‍ಲೈನ್ ಮೂಲಕ ಸೀಟು ಹಂಚಿಕೆ ಮಾಡಲು ಹಾಗೂ ಅಭ್ಯರ್ಥಿಗಳ ದಾಖಲೆಯನ್ನು ಪರಿಶೀಲನೆ ಮಾಡಲು,  ಜಿಲ್ಲೆಯ ಉಡುಪಿ ತಾಲೂಕಿನ ಉದ್ಯಾವರ ಎಸ್.ಡಿ.ಎಂ ಆಯುರ್ವೇದಿಕ ಮಹಾವಿದ್ಯಾಲಯದಲ್ಲಿ 2019-20 ನೇ ಸಾಲಿನಲ್ಲಿ ಸಹಾಯಕ ಕೇಂದ್ರ ಪ್ರಾರಂಭಿಸಲಾಗಿದೆ.

ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮಾಡಲು ಜಿಲ್ಲೆಯ ಇಬ್ಬರು ನೋಡೆಲ್ ಅಧಿಕಾರಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇವರನ್ನು ನೇಮಕ ಮಾಡಿರುತ್ತಾರೆ.

ಎಸ್.ಡಿ.ಎಮ್ ಆಯುರ್ವೇದ ಮೆಡಿಕಲ್ ಕಾಲೇಜ್, ಲಕ್ಷ್ಮೀ ನಾರಾಯಣ ನಗರ, ಕುತ್ಪಾಡಿಯಲ್ಲಿ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ನೋಡೆಲ್ ಅಧಿಕಾರಿಯಾಗಿ ಪಂಡರಿನಾಥ .ಎಸ್, ಪ್ರಾಂಶುಪಾಲರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಪೊಲಿಪು-ಕಾಪು (ಮೊ.ನಂ: 9481963630) ಇವರನ್ನು ನೇಮಿಸಿದೆ.

ಅಡಿಶನಲ್ ನೋಡೆಲ್ ಅಧಿಕಾರಿಯಾಗಿ ರಾಘವೇಂದ್ರ ಎನ್.ಆರ್, ಉಪನ್ಯಾಸಕರು, ಪಾಲಿಟೆಕ್ನಿಕ್ ಉಡುಪಿ (ಮೊ.ನಂ: 9972511122) ಇವರನ್ನು ನೇಮಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸುವಂತೆ  ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.