ಸಿಇಟಿ ಪರೀಕ್ಷೆಗೆ ಹಾಜರಾಗುವ ಮುನ್ನ ಡ್ರೆಸ್ ಕೋಡ್ ಹಾಗೂ ಈ ನಿಯಮಗಳನ್ನು ಗಮನದಲ್ಲಿಡಿ

ಪುರುಷ ಅಭ್ಯರ್ಥಿಗಳಿಗೆ ನಿಯಮಗಳು

  • ಪೂರ್ಣ ತೋಳಿನ ಶರ್ಟ್‌ಗಳಿಗೆ ಅವಕಾಶ ಇಲ್ಲ; ಅರ್ಧ ತೋಳಿನ ಶರ್ಟ್ ಧರಿಸಬೇಕು
  • ಕಾಲರ್ ಇಲ್ಲದ ಸರಳ ಟೀ-ಶರ್ಟ್ ಅಥವಾ ಶರ್ಟ್ ಧರಿಸುವುದು ಉತ್ತಮ
  • ಕಡಿಮೆ ಜೇಬುಗಳಿರುವ ಸರಳ ಪ್ಯಾಂಟ್ ಧರಿಸಬೇಕು
  • ಜೀನ್ಸ್ ಮತ್ತು ಕುರ್ತಾ-ಪೈಜಾಮಾ ಅನುಮತಿ ಇಲ್ಲ
  • ದೊಡ್ಡ ಬಟನ್, ಜಿಪ್ ಅಥವಾ ಕಸೂತಿ ಇರುವ ಬಟ್ಟೆಗಳನ್ನು ತೊಡಬಾರದು
  • ಶೂಗಳನ್ನು ಧರಿಸಲು ಅವಕಾಶ ಇಲ್ಲ; ಸ್ಯಾಂಡಲ್ ಅಥವಾ ಚಪ್ಪಲಿ ಮಾತ್ರ ಧರಿಸಬೇಕು
  • ಯಾವುದೇ ಲೋಹದ ಆಭರಣ (ಉಂಗುರ, ಚೈನ್, ಕಿವಿಯೋಲೆ) ನಿಷೇಧ

ಮಹಿಳಾ ಅಭ್ಯರ್ಥಿಗಳಿಗೆ ನಿಯಮಗಳು

  • ಕಸೂತಿ, ದೊಡ್ಡ ಬಟನ್ ಅಥವಾ ಅಲಂಕಾರ ಇರುವ ಬಟ್ಟೆಗಳಿಗೆ ಅವಕಾಶ ಇಲ್ಲ
  • ಪೂರ್ಣ ತೋಳಿನ ಬಟ್ಟೆ ಮತ್ತು ಜೀನ್ಸ್ ಧರಿಸಬಾರದು; ಅರ್ಧ ತೋಳಿನ ಬಟ್ಟೆ ಧರಿಸಬೇಕು
  • ಹೈ ಹೀಲ್ಸ್ ಅಥವಾ ಶೂಗಳು ಧರಿಸುವಂತಿಲ್ಲ, ಸರಳ ಚಪ್ಪಲಿ ಧರಿಸಬೇಕು
  • ಲೋಹದ ಆಭರಣ ಧರಿಸಲು ಅವಕಾಶ ಇಲ್ಲ (ಮಂಗಳಸೂತ್ರ, ಕಾಲುಂಗುರ ಹೊರತುಪಡಿಸಿ)

ನಿಷೇಧಿತ ವಸ್ತುಗಳು

  • ಮೊಬೈಲ್, ಇಯರ್‌ಫೋನ್, ಬ್ಲೂಟೂತ್, ಪೆನ್ ಡ್ರೈವ್, ಗಡಿಯಾರ ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳು
  • ಆಹಾರ ಪದಾರ್ಥಗಳು
  • ಬಣ್ಣದ ಅಥವಾ ಲೋಹದ ನೀರಿನ ಬಾಟಲಿ
  • ಪೆನ್ಸಿಲ್, ಪೇಪರ್, ಎರೇಸರ್, ಜ್ಯಾಮಿಟ್ರಿ ಬಾಕ್ಸ್
  • ಟೋಪಿ, ಹ್ಯಾಟ್ ಮತ್ತು ಮುಖ ಮುಚ್ಚುವ ಮಾಸ್ಕ್

ತರಬೇಕಾದ ವಸ್ತುಗಳು

  • ಪ್ರವೇಶ ಪತ್ರ (Hall Ticket) ಕಡ್ಡಾಯ
  • ಸರ್ಕಾರ ಮಾನ್ಯತೆ ಪಡೆದ ಗುರುತಿನ ಚೀಟಿ

ಗಮನಿಸಿ: