ನವದೆಹಲಿ:ಮಸ್ಕ್, ಮೆಟಾದ ‘ವಾಟ್ಸ್ಅಪ್’ ರೀತಿಯಲ್ಲೇ ವಿಡಿಯೋ ಕಾಲ್ ಮತ್ತು ವಾಯ್ಸ್ ಕಾಲ್ ಫೀಚರ್ ಅನ್ನು ತಯಾರಿಸಲು ಮುಂದಾಗಿದೆ ಹಲವು ಹೊಸ ಬೆಳವಣಿಗೆ ಮತ್ತು ಬಳಕೆದಾರರ ಸ್ನೇಹಿಯಾಗಲು ಸಂದೇಶವಾಹರ ಎಕ್ಸ್ ಮುಂದಾಗುತ್ತಿದೆ. ಎಕ್ಸ್ ಇದೀಗ ಮತ್ತೊಂದು ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ.
ಸಿಎನ್ಬಿಸಿಗೆ ಈ ಕುರಿತು ಮಾತನಾಡಿರುವ ಎಕ್ಸ್ ಕಾರ್ಪ್ ಸಿಇಒ ಲಿಂಡಾ ಯಾಕರಿನೊ, ನಿಮ್ಮ ಫೋನ್ ನಂಬರ್ ನೀಡದೇ ಎಕ್ಸ್ನಲ್ಲಿರುವ ನಿಮ್ಮ ಸ್ನೇಹಿತರಿಗೆ ಇದೀಗ ವಿಡಿಯೋ ಚಾಟ್ ಮಾಡಿ ಮಾತನಾಡಬಹುದು ಎಂದಿದ್ದಾರೆ. ಇದೇ ವೇಳೆ ಅವರು ಜಾಲತಾಣದಲ್ಲಿ ದೀರ್ಘ ವಿಡಿಯೋ ಮತ್ತು ಬಳಕೆದಾರರ ಸಬ್ಸ್ಕ್ರಿಪ್ಷನ್ ಮತ್ತು ಡಿಜಿಟಲ್ ಪೇಮೆಂಟ್ಗಳ ಕುರಿತು ಮಾತನಾಡಿದ್ದಾರೆ.
ಅದುವೇ ವಿಡಿಯೋ ಕಾಲ್. ಚೀನಾದ ‘ವಿ ಚಾಟ್ನಂತೆ ಎವರಿಥಿಂಗ್ ಆಯಪ್’ ಮಾದರಿಯಲ್ಲಿ ಗುರಿಯಾಗಿಸಿಕೊಂಡು ಈ ಹೊಸ ಫೀಚರ್ ಪರಿಚಯಿಸುತ್ತಿದೆ. ಅದರ ಅನುಸಾರ ಮೈಕ್ರೋಬ್ಲಾಗಿಂಗ್ ತಾಣವಾಗಿರುವ ಎಕ್ಸ್ನಲ್ಲಿ ಇದೀಗ ವಿಡಿಯೋ ಕಾಲ್ ಆಯ್ಕೆಯನ್ನು ಬಳಕೆದಾರರಿಗೆ ಶೀಘ್ರವಾಗಿ ನೀಡುವುದಾಗಿ ಎಕ್ಸ್ ಸಿಇ ಯಾಕೊರಿನೊ ತಿಳಿಸಿದ್ದಾರೆ.
ಹಕ್ಕಿಯ ಲೋಗೊ ಬದಲಾಗಿ ಎಕ್ಸ್ ಎಂಬ ಲೋಗವನ್ನು ಡಿಸೈನ್ ಮಾಡಿರುವ ಆಯಂಡ್ರೆ ಕೊನ್ವೆ ಕೂಡ ‘ಯಾರನ್ನೋ ಸುಮ್ಮನೆ ಎಕ್ಸ್ ಕರೆದಿದೆ’ ಟ್ವೀಟ್ ಮೂಲಕ ಈ ವಿಡಿಯೋ ಕರೆಯ ಆಪ್ಷನ್ ನೀಡುವ ಸುಳಿವನ್ನು ಈ ಮೂಲಕ ನೀಡಿದ್ದರು. ಇದೀಗ ಸಿಇಒ ಯಾಕೊರಿನೊ ವಾಯ್ಸ್ ಕಾಲ್ಸ್ ಅಥವಾ ವಿಡಿಯೋ ಕಾಲ್ ಅಥವಾ ಎರಡನ್ನು ಎಕ್ಸ್ ಮೈಕ್ರೋಬ್ಲಾಗಿಂಗ್ನಲ್ಲಿ ಅಳವಡಿಸುವ ಸುಳಿವನ್ನು ನೀಡಿದ್ದಾರೆ.
ಈ ಕುರಿತು ಪೋಡೊಕಾಸ್ಟ್ನಲ್ಲಿ ಮಾತನಾಡಿದ್ದ ಅವರು, ಟ್ವಿಟರ್ ತಂತ್ರಜ್ಞಾನವನ್ನು ಮತ್ತಷ್ಟು ವೇಗಗೊಳಿಸಲು 3ರಿಂದ 5 ವರ್ಷ ಬೇಕಾಗಬಹುದು ಎಂದು ಏಣಿಸಿದ್ದೆ. ಆದರೆ ಇದು ತಪ್ಪು ಎಂದಿದ್ದರು. ಟ್ವಿಟರ್ ಖರೀದಿ ಬಳಿಕ ಮಸ್ಕ್ ಉದ್ಯೋಗ ಕಡಿತದಿಂದ ಬ್ಲೂಟಿಕ್ ಚಂದಾದಾರಿಕೆವರೆಗೆ ಹಲವು ಪ್ರಕ್ರಿಯೆಗಳನ್ನು ನಡೆಸುತ್ತಲೇ ಬರುತ್ತಿದ್ದಾರೆ.ಮಾಸ್ಕ್ ಯಾವಾಗಲೂ ಚೀನಾದ ವಿಚಾಟ್ನಂತೆ ಎಲ್ಲವೂ ಹೊಂದಿರುವ ಆಯಪ್ ಆಗಿ ಟ್ವಿಟರ್ ಅನ್ನು ರೂಪಿಸಲು ಇಚ್ಛೆ ಹೊಂದಿದ್ದರು. ಟ್ವಿಟರ್ ಅನ್ನು ಖರೀದಿಸುವ ಮೂಲಕ ಅದರಲ್ಲಿ ಎಲ್ಲ ತಂತ್ರಜ್ಞಾನದ ಸೌಲಭ್ಯ ಬಳಕೆದಾರರಿಗೆ ಒಂದೇ ತಾಣದಲ್ಲಿ ಸಿಗುವಂತೆ ರೂಪಿಸುವುದಾಗಿ ಕಳೆದ ಅಕ್ಟೋಬರ್ನಲ್ಲಿ ಘೋಷಿಸಿದ್ದರು. ಇದೇ ಕಾರಣಕ್ಕೆ 44 ಬಿಲಿಯನ್ ಕೊಟ್ಟು ಮಸ್ಕ್ ಟ್ವಿಟರ್ ಖರೀದಿಸಿದ್ದರು.
ಇನ್ನು ಇವರ ನಡುವಿನ ಕೇಜ್ ಫೈಟ್ ಕುರಿತು ಕೂಡ ಪ್ರತಿಕ್ರಿಯಿಸಿರುವ ಯಾಕರಿನೊ, ಕೇಜ್ ಮ್ಯಾಚ್ ಒಂದು ವೇಳೆ ನಡೆದರೆ, ಮೊದಲ ಸಾಲಿನಲ್ಲೇ ಕುಳಿತು ಮಸ್ಕ್ ತರಬೇತಿಯ ಕುರಿತು ನೋಡಲಾಗುವುದು ಎಂದು ಚಟಾಕಿ ಹಾರಿಸಿದ್ದಾರೆ.ವಾಟ್ಸ್ಆಯಪ್ಗೆ ಠಕ್ಕರ್: ಈಗಾಗಲೇ ಮೆಟಾ ಮಾಲೀಕ ಮಾರ್ಕ್ ಜುಗರ್ಬರ್ಗ್ ಮತ್ತು ಟ್ವಿಟರ್ ಮಾಲೀಕ ಮಸ್ಕ್ ನಡುವಿನ ಶೀತಲ ಸಮರ ವಿಚಾರ ತಿಳಿಯದ ವಿಚಾರವೇನಲ್ಲ ಬಿಡಿ. ಮಸ್ಕ್ ಎಕ್ಸ್ಗೆ ಪ್ರತಿಯಾಗಿ ಟ್ವಿಟರ್ ರೀತಿಯಲ್ಲೇ ‘ಥ್ರೆಡ್’ ಅಯಪ್ ಅನ್ನು ಇನ್ಸ್ಟಾದಲ್ಲಿ ರೂಪಿಸಲಾಗಿತ್ತು. ಇದೀಗ ಮಸ್ಕ್ ಮೆಟಾದ ‘ವಾಟ್ಸ್ ಆಯಪ್’ ರೀತಿಯಲ್ಲೇ ವಿಡಿಯೋ ಕಾಲ್ ಮತ್ತು ವಾಯ್ಸ್ ಕಾಲ್ ಫೀಚರ್ ಅನ್ನು ರೂಪಿಸುವ ಮೂಲಕ ಅವರಿಗೆ ಎದುರಾಳಿಗೆ ಉತ್ತರ ನೀಡಲು ಸಜ್ಜಾಗಿದ್ದಾರೆ.