ಕಾರ್ಕಳ: ಮುಸ್ಲಿಂ ಧರ್ಮೀಯರಿಂದ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ

ಕಾರ್ಕಳ: ಮುಸ್ಲಿಂ ಧರ್ಮೀಯರ ಪವಿತ್ರ ಈದ್ ಉಲ್ ಫಿತ್ರ್ ಹಬ್ಬವನ್ನು ಇಂದು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಒಂದು ತಿಂಗಳುಗಳ ಕಾಲ ಪವಿತ್ರ ರಮ್ಜಾನ್ ಮಾಸದ ಉಪವಾಸ ಆಚರಣೆಯ ಬಳಿಕ ಶುಕ್ರವಾರ ರಾತ್ರಿ ಚಂದ್ರ ದರ್ಶನವಾದ ಕಾರಣ ಇಂದು ಹಬ್ಬ ಆಚರಿಸಲಾಗುತ್ತಿದೆ. ಅರಬ್ ರಾಷ್ಟ್ರಗಳಲ್ಲಿ ನಿನ್ನೆಯ ದಿನದಂದು ಹಬ್ಬವನ್ನು ಆಚರಿಸಲಾಯಿತು.

ಕಾರ್ಕಳದಲ್ಲಿ ಇಂದು ಹಬ್ಬದ ಪ್ರಯುಕ್ತ ಮುಸ್ಲಿಮರಿಂದ ವಿಶೇಷವಾಗಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಸಾಲ್ಮರ ಈದ್ಗಾದಲ್ಲಿ ಸಾವಿರಾರು ಜನ ಮುಸ್ಲಿಮರು ಜಾಮಿಯಾ ಮಸೀದಿಯ ಗುರುಗಳಾದ ಮೌಲಾನ ಝಹೀರ್ ಅಹ್ಮದ್ ಖಾಸಿಮಿಯವರ ನೇತೃತ್ವದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ನೆರವೇರಿಸಿದರು. ಜಮಾತ್ ನ ಅಧ್ಯಕ್ಷ ಜನಾಬ್ ಅಶ್ಫಾಕ್ ಅಹ್ಮದ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸಮಸ್ತ ಜನತೆಗೆ ಈದ್ ಶುಭಾಶಯ ಕೋರಿದರು.