ಕೆಥೊಲಿಕ್ ಸಭಾ ಸಾಸ್ತಾನ ಘಟಕ: ನೂತನ ಅಧ್ಯಕ್ಷರಾಗಿ ಸಿಂತಿಯಾ ಡಿಸೋಜಾ ಪುನರಾಯ್ಕೆ

ಉಡುಪಿ: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಸಂತ ಅಂತೋನಿ ದೇವಾಲಯ ಸಾಸ್ತಾನ ಘಟಕದ 2021-22 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಿಂತಿಯಾ ಡಿಸೋಜಾ ಅವರು ಪುನರಾಯ್ಕೆಯಾಗಿದ್ದಾರೆ.

ಭಾನುವಾರ ಚರ್ಚಿನ ಪಾದ್ವಾ ಸಭಾಂಗಣದಲ್ಲಿ  ಕೆಥೊಲಿಕ್ ಸಭಾದ ಸದಸ್ಯರ ಹಾಜರಾತಿಯೊಂದಿಗೆ ನೂತನ  ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆ ನಡೆಯಿತು.

ಇತರ ಪಧಾದಿಕಾರಿಗಳಾಗಿ ಈ ಕೆಳಗಿನವರು ಆಯ್ಕೆಯಾದರು. ಆಧ್ಯಾತ್ಮಿಕ ನಿರ್ದೇಶಕ ಜಾನ್ ವಾಲ್ಟರ್ ಮೆಂಡೊನ್ಸಾ, ನಿಯೋಜಿತ ಅಧ್ಯಕ್ಷರಾಗಿ ಐವನ್ ಡಿ’ಆಲ್ಮೇಡಾ, ಉಪಾಧ್ಯಕ್ಷರಾಗಿ ಮೈಕಲ್ ರೊಡ್ರಿಗಸ್, ಕಾರ್ಯದರ್ಶಿಯಾಗಿ ಜಾನೆಟ್ ಬಾಂಜ್, ಸಹಕಾರ್ಯದರ್ಶಿಯಾಗಿ ಜೆನವಿವ್ ಡಿಸೋಜಾ, ಕೋಶಾಧಿಕಾರಿಯಾಗಿ ಲೂಯಿಸ್ ಮ್ಯಾಕ್ಷಿಮ್ ಡಿಸೋಜಾ, ಸಹ ಕೋಶಾಧಿಕಾರಿಯಾಗಿ ಸುಜಾನ್ನಾ ಆಲ್ಮೇಡಾ, ಆಮ್ಚೊ ಸಂದೇಶ್ ಪತ್ರಿಕೆಯ ಪ್ರತಿನಿಧಿಯಾಗಿ ವೀರಾ ಪಿಂಟೊ, ರಾಜಕೀಯ ಸಂಚಾಲಕರಾಗಿ ಶೈಲಾ ಸಲ್ಡಾನಾ, ಸರಕಾರಿ ಸವಲತ್ತುಗಳ ಪ್ರತಿನಿಧಿಯಾಗಿ ಮಾಲಾ ಲೂವಿಸ್, ಆಂತರಿಕ ಲೆಕ್ಕಪರಿಶೋಧಕರಾಗಿ ಶರ್ಮಿಳಾ ಡಿಸೋಜಾ ಆಯ್ಕೆಯಾದರು.

ಇತರ ಸಮಿತಿಯ ಸದಸ್ಯರುಗಳಾಗಿ ಜಸಿಂತಾ ಸೆರಾವೊ, ವಲೇರಿಯನ್ ಆಲ್ಮೇಡಾ, ಜೋಸೆಫ್ ಡಿಸೋಜಾ, ಜೋಸೆಫ್ ಬಾಂಜ್ ಮತ್ತು ವಿನ್ನಿಫ್ರೆಡ್ ಸೆರಾವೊ ಆಯ್ಕೆಯಾದರು. ಪದಾಧಿಕಾರಿಗಳಾ ಆಯ್ಕೆಯ ಪ್ರಕ್ರಿಯೆಗೆ ಚುನಾವಣಾಧಿಕಾರಿಗಳಾಗಿ ಎಲಿಯಾಸ್ ಡಿಸೋಜಾ ಸಂತೆಕಟ್ಟೆ ಮತ್ತು ವೀಕ್ಷಕರಾಗಿ ಜ್ಯೋತಿ ಲೂವಿಸ್ ಸಂತೆಕಟ್ಟೆ ಉಪಸ್ಥಿತರಿದ್ದರು.