ವಾಯುವ್ಯ ಚೀನಾದಲ್ಲಿ 6.2 ತೀವ್ರತೆಯ ಪ್ರಬಲ ಭೂಕಂಪ: ಕನಿಷ್ಠ 116 ಸಾವು; 400 ಗಾಯಾಳು

ಬೀಜಿಂಗ್: ವಾಯುವ್ಯ ಚೀನಾದ ದೂರದ ಪರ್ವತ ಪ್ರದೇಶದಲ್ಲಿ 6.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 400 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಭೂಕಂಪ ಪರಿಹಾರ ಕೇಂದ್ರ ಮಂಗಳವಾರದಂದು ತಿಳಿಸಿದೆ. ಚೀನಾ ಭೂಕಂಪ ನೆಟ್‌ವರ್ಕ್ ಸೆಂಟರ್ (ಸಿಇಎನ್‌ಸಿ) ಪ್ರಕಾರ ಸೋಮವಾರ ರಾತ್ರಿ 11.59 ಕ್ಕೆ ಗನ್ಸು ಮತ್ತು ಕಿಂಗ್ಹೈ ಪ್ರಾಂತ್ಯಗಳಲ್ಲಿ ಭಾರಿ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರ 10 ಕಿಲೋಮೀಟರ್ ಆಳದಲ್ಲಿತ್ತು. 6.2 ತೀವ್ರತೆಯ ಪ್ರಬಲ ಕಂಪನದ ಬಳಿಕ ನೆರೆಯ […]

‘ವಿಷಪ್ರಾಶನ’;ದ ಹಿನ್ನೆಲೆ ತೀವ್ರ ಅಸ್ವಸ್ಥಗೊಂಡಿದ್ದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕರಾಚಿ ಆಸ್ಪತ್ರೆಗೆ ದಾಖಲು

ಕರಾಚಿ (ಪಾಕಿಸ್ತಾನ): ಭೂಗತ ಪಾತಕಿ ಮತ್ತು ಭಾರತದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂಗೆ ‘ವಿಷಪ್ರಾಶನ’ ಮಾಡಿಸಲಾಗಿದ್ದು, ಆತನನ್ನು ಪಾಕಿಸ್ತಾನದ ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಆಸ್ಪತ್ರೆಯಲ್ಲಿ ದಾವೂದ್ ಇಬ್ರಾಹಿಂನನ್ನು ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ. ಅಲ್ಲದೆ ಭೂಗತ ಪಾತಕಿಯು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆಸ್ಪತ್ರೆಯ ಸಂಪೂರ್ಣ ಮಹಡಿಯನ್ನೇ ಇಬ್ರಾಹಿಂಗೆ ಮೀಸಲಿಡಲಾಗಿದೆ. ಅವನ ಹತ್ತಿರದ ಕುಟುಂಬ ಸದಸ್ಯರು ಮತ್ತು ಸಂಬಂಧಪಟ್ಟ ವೈದ್ಯರನ್ನು ಹೊರತುಪಡಿಸಿ ಹೊರಗಿನಿಂದ ಯಾರಿಗೂ ಅವಕಾಶ ನೀಡುತ್ತಿಲ್ಲ. […]

ಹೊಸ ಪ್ರಸ್ತಾವನೆ ಮುಂದಿಟ್ಟ ಕತಾರ್: ಇಸ್ರೇಲ್-ಹಮಾಸ್ ಕದನವಿರಾಮ

ಗಾಝಾ : ಕದನವಿರಾಮಕ್ಕಾಗಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಒತ್ತೆಯಾಳು ಬಿಡುಗಡೆ ಒಪ್ಪಂದವನ್ನು ಪುನರಾರಂಭಿಸಲು ಕತಾರ್ ಪ್ರಯತ್ನಿಸುತ್ತಿದೆ. ಡಿಸೆಂಬರ್ 16 ರಿಂದ ನಾರ್ವೆಯಲ್ಲಿ ನಡೆದ ಅಘೋಷಿತ ಸಭೆಗಳಲ್ಲಿ ಉನ್ನತ ಮಟ್ಟದ ಕತಾರ್ ನಿಯೋಗವು ಇಸ್ರೇಲ್ ಅಧಿಕಾರಿಗಳೊಂದಿಗೆ ಈ ಪ್ರಸ್ತಾಪಗಳನ್ನು ಚರ್ಚಿಸುತ್ತಿದೆ ಎಂದು ಮೂಲಗಳು ಭಾನುವಾರ ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿವೆ. ಗಾಜಾ ಪಟ್ಟಿಯಲ್ಲಿ ಮತ್ತೊಂದು ಹಂತದ ಕದನ ವಿರಾಮ ಜಾರಿಗೊಳಿಸಲು ಕತಾರ್ ಹೊಸ ಪ್ರಸ್ತಾಪಗಳನ್ನು ಮಂಡಿಸಿದೆ ಎಂದು ಪ್ಯಾಲೆಸ್ಟೈನ್ ಮೂಲಗಳು ತಿಳಿಸಿವೆ.ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಕದನ […]

ಮುಂಬೈ ಬಾಂಬ್ ಸ್ಪೋಟದ ರೂವಾರಿ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ; ಆಸ್ಪತ್ರೆಗೆ ದಾಖಲು?

ಕರಾಚಿ: ಭಾರತದಿಂದ ಪರಾರಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಪಾಕಿಸ್ತಾನದ ಕರಾಚಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ವಿಷಪ್ರಾಶನದಿಂದಾಗಿ ಅತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಊಹಾಪೋಹಗಳು ಹರಿದಾಡುತ್ತಿವೆ. ಪಾಕಿಸ್ತಾನ ಇನ್ನೂಈ ಸುದ್ದಿಯನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ದಾವೂದ್ ಇಬ್ರಾಹಿಂನನ್ನು ಆಸ್ಪತ್ರೆಯೊಳಗೆ ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ ಎಂದು ಹಲವಾರು ವರದಿಗಳು ಸೂಚಿಸುತ್ತಿವೆ. 1993ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಮತ್ತು ಭಾರತದ ಮೋಸ್ಟ್ ವಾಂಟೆಡ್ ಪಾತಕಿ ದಾವೂದ್ ಇಬ್ರಾಹಿಂ ದಶಕಗಳಿಂದ ಪಾಕಿಸ್ತಾನದಲ್ಲಿ ಇದ್ದಾನೆ ಎಂದು ವರದಿಯಾಗಿದೆ. ವಿನಾಶಕಾರಿ ಬಾಂಬ್ ಸ್ಫೋಟಳಿಂದಾಗಿ […]

ಗಾಯಕ್ವಾಡ್​ ಬದಲಿಗೆ ಗಿಲ್​ ಕಣಕ್ಕೆ : ಟಾಸ್​ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್​ ಆಯ್ಕೆ

ಗ್ಕೆಬರ್ಹಾ (ದಕ್ಷಿಣ ಆಫ್ರಿಕಾ): ತುಂತುರು ಮಳೆ ಮತ್ತು ಮೋಡದ ನಡುವೆಯೇ ಎರಡನೇ ಪಂದ್ಯದ ಟಾಸ್​ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್​ ಆಯ್ದುಕೊಂಡಿದೆ.ಮೊದಲ ಪಂದ್ಯ ಮಳೆಗೆ ಆಹುತಿ ಆಯುತು. 2024ರ ಟಿ20 ವಿಶ್ವಕಪ್​ ತಯಾರಿ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ 3 ಪಂದ್ಯಗಳ ಸರಣಿ ನಡೆಯುತ್ತಿದೆ. ಸೇಂಟ್ ಜಾರ್ಜ್ ಪಾರ್ಕ್​ ಮೈದಾನದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡದ ನಡುವಿನ ಎರಡನೇ ಟಿ20 ಪಂದ್ಯ ನಡೆಯುತ್ತಿದ್ದು, ಟಾಸ್​ ಗೆದ್ದ ಹರಿಣಗಳ ನಾಯಕ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. […]